

ಹೊಳೆನರಸೀಪುರ: ಸಮಾನತೆಯ ಜ್ಯೋತಿ ಹಚ್ಚಿದವರು ಅಂಬೇಡ್ಕರ್ ಎಂದು ತಾಲೂಕು ಅಂಬೇಡ್ಕರ್ ಸೇವಾ ಸಮಿತಿಯ ಕಾರ್ಯದರ್ಶಿ ಸುಪ್ರೀತ್ ಪಾಸ್ವಾನ್ ಹೇಳಿದರು.
ಪಟ್ಟಣದ ಭಾರತೀಯ ಜೀವ ವಿಮಾ ನಿಗಮ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ಸನೇ ಜಯಂತ್ಯುತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್, ಬುದ್ಧ, ಬಸವ, ಕನಕ ಎಲ್ಲರನ್ನು ಜಾತಿ ಎಂಬ ಹೆಸರಿನ ಬಂಧನದಲ್ಲಿರಿಸಲಾಗಿದೆ. ಇದು ಸಮಾಜಕ್ಕೆ ಮಾರಕವಾದ ಸಂದೇಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸಮಾಜದ ಜಾತೀಯತೆ ಅಸಮಾನತೆ ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡಿದ ಮಹನೀಯರನ್ನು ಜಾತಿ ಎಂಬ ವಿಷ ಬೀಜದಿಂದ ಅಗೌರವಿಸುತಿದ್ದೇವೆ. ಕೇವಲ ಜಯಂತಿಗಳನ್ನು ಆಚರಿಸಿ ಅವರ ಸಂದೇಶಗಳನ್ನು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಶೀಧರಿ ಅಜಿತ್ ಕಿರಣ್, ಉಪ ಶಾಖಾಧಿಕಾರಿ ಅರುಣ್‌ಕುಮಾರ್, ಸಿಬ್ಬಂದಿ ಮಹದೇವಯ್ಯ, ಉದಯ ಲಕ್ಷ್ಮೀ, ವೀಣಾ, ಗೌತಮ್ ವಿಜಯಕುಮಾರ್, ರಂಗಸ್ವಾಮಿ, ಶಿವಕುಮಾರ್, ಪ್ರಕಾಶ್, ಸುರೇಶ್, ಸ್ವಾಮಿ, ಅಭಿವೃದ್ಧಿ ಅಧಿಕಾರಿಗಳಾದ ಟಿ.ಪಿ. ಅರವಿಂದ್, ಮಹೇಶ್, ನಾಗಪ್ರಸಾದ್, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕೆ.ರಮೇಶ್ ಇತರರು ಇದ್ದರು.