ಸಮಾನತೆ,ಜಾತ್ಯತೀತೆಯ ದೃಷ್ಟಿ ನಮ್ಮೆಲ್ಲದಾಗಿರ ಬೇಕು,ಶ್ರೀಮಾದಾರ ಶ್ರೀ

ctd 15 muruga-003
Published on

ಚಿತ್ರದುರ್ಗ: ನಮ್ಮ ದೃಷ್ಟಿ ಪರಂಪರಾಗತವಾಗದೆ ಪಾರದರ್ಶಕವಾಗಿರಬೇಕು. ಬುದ್ಧನ ಸಮಾನತೆ ಕಡೆಯ ಹಾಗೂ ಬಸವಣ್ಣನವರ ಜಾತ್ಯತೀತೆಯ ಕಡೆಗಿದ್ದ ದೃಷ್ಟಿ ಇವತ್ತಿನ ಸಂದರ್ಭದಲ್ಲಿ ನಮ್ಮೆಲ್ಲರದಾಗಬೇಕಿದೆ ಎಂದು ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಗುರುವಾರ‘ನಿತ್ಯಕಲ್ಯಾಣ’ಮನೆ,ಮನೆಗೆ ಚಿಂತನ ಕಾರ‌್ಯಕ್ರಮ ಸಮಾರೋಪದಲ್ಲಿ ಮಾ ತನಾಡಿದ ಶ್ರೀಗಳು,90ರ ದಶಕದಿಂದಲೂ ಶ್ರೀಮುರುಘಾಮಠದಲ್ಲಿ ನಿತ್ಯಕಲ್ಯಾಣದ ಕಾರ‌್ಯಕ್ರಮಗಳು ನಡೆಯುತ್ತಾ ಬಂದಿವೆ. ಎಲ್ಲ ಸಮುದಾ ಯದವರಿಗೆ ಸಂಸ್ಕಾರ,ಆಧ್ಯಾತ್ಮ,ಸಮಾನತೆ ಸಿಗಲೆಂಬ ದಿವ್ಯದೃಷ್ಟಿಯಿಂದ ಶ್ರೀಮಠ ಇಂಥ ಕಾರ‌್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ ಎಂದರು.
ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವುದೇ ದಿವ್ಯದೃಷ್ಟಿ. ದೇವರ ವಿಳಾಸವನ್ನು ಮೊದಲು ತಿಳಿಸಿದವರು ಬಸವಣ್ಣನವರು. ಮಾನವನಲ್ಲೇ ಮಹಾದೇವನನ್ನು ತೋರಿಸಿಕೊಟ್ಟರು. 12ನೇ ಶತಮಾನ ಮಾನವಕುಲಕ್ಕೆ ಸಮಾನತೆ ಯನ್ನು ನೀಡಿದ ಕಾಲವಾಗಿತ್ತು. ಶರಣರಿಗೆ ಅಂತಹ ದಿವ್ಯದೃಷ್ಟಿಯಿತ್ತು. ನಿತ್ಯ ಕಲ್ಯಾಣ ಶ್ರಾವಣಮಾಸಕ್ಕೆ ಸೀಮಿತವಾಗದೆ ನಿತ್ಯವೂ ನಡೆದರೆ ಸಮುದಾಯಕ್ಕೆ ಒಳಿತಾಗುತ್ತದೆ ಎಂದರು.
ಮಡಿವಾಳ ಗುರುಪೀಠದ ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿ,ದಲಿತ ಹಿಂದುಳಿದ ಮಠಗಳು ಆರಂಭವಾಗಿದೆ ಎಂದ ರೆ ಅದಕ್ಕೆ ಮುರುಘಾಮಠದ ಡಾ.ಶಿವಮೂರ್ತಿ ಶರಣರು ಕಾರಣರಾಗಿದ್ದಾರೆ. ಬಸವಣ್ಣನವರ ಆಶಯದಂತೆ ಸಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಮುಖ್ಯಅತಿಥಿ ಹುರಳಿ ಎಂ.ಬಸವರಾಜ ದಿವ್ಯದೃಷ್ಟಿ ವಿಷಯ ಕುರಿತು ಮಾತನಾಡಿ,ನಮ್ಮ ದೃಷ್ಟಿ ಯಾವಾಗಲೂ ಸಮಾಜಮುಖಿಯಾಗಿರ ಬೇ ಕು. ಅದು ಸ್ವಾರ್ಥದಿಂದ ಕೂಡಿರಬಾರದು. ನಾಲ್ಕುದಿನದ ಬದುಕಿನಲ್ಲಿ ಸಮಾಜದ ಹಿತಚಿಂತಕರಾಗಿ ಬದುಕುವಂತ ದೃಷ್ಟಿಕೋನ ನಮ್ಮದಾಗ ಬೇಕೆಂದರು.
ವೀರಶೈವ ಸಮಾಜದ ಕಾರ‌್ಯದರ್ಶಿ,ವಕೀಲ ಎನ್.ಬಿ.ವಿಶ್ವನಾಥ್ ಮಾತನಾಡಿ,ಈ ಕಾರ‌್ಯಕ್ರಮದ ಚಿಂತನೆಯ ವಿಷಯ ಗಳು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳು ವಂತ ಶ್ರೇಷ್ಠ ಮೌಲ್ಯಗಳಾಗಿವೆ.ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಒತ್ತಡಗಳಿಂದ ಮುಕ್ತ ರಾಗಬಹುದೆಂದರು. ವಕೀಲ ಕೆ.ಎಂ.ವಿಶ್ವನಾಥಯ್ಯ ಮಾತನಾಡಿದರು.
ವೀಣಾ ಸುರೇಶ್‌ಬಾಬು,ವೀರಶೈವ ಸಮಾಜದ ಮುಖಂಡರು, ಹರಗುರು ಚರಮೂರ್ತಿಗಳು,ಎಸ್‌ಜೆಎಂ ವಿದ್ಯಾಪೀಠದ ಶಾಲಾ- ಕಾಲೇ ಜುಗಳ ಮುಖ್ಯಸ್ಥರು ಇದ್ದರು. ಎಸ್.ಷಡಾಕ್ಷರಯ್ಯ ಸ್ವಾಗತಿಸಿ,ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net