ಸಮಾನತೆಗೆ ಶ್ರಮಿಸಿದ ಶಿವಶರಣರು

23KDR1 web
Published on

ಕಡೂರು: ಅನುಭವ ಮಂಟಪದ ಮೂಲಕ ಕಾಯಕದ ಮಹತ್ವ ಸಾರಿದ ಬಸವಾದಿ ಶರಣರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.  ಚೀಲನಹಳ್ಳಿಯಲ್ಲಿ ಸೋಮವಾರ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ವಚನಗಳ ಮೂಲಕ ಸರಳವಾಗಿ ಜೀವನ ಪಾಠ ಮಾಡಿದರು. ಬದುಕಿನ ಮಾರ್ಗ ತೋರಿಸಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಗುರುಪ್ರಸಾದ್ ಮಾತನಾಡಿ, ಶರಣರ ಬದುಕೇ ಒಂದು ಸಂದೇಶ. ಶರಣರು ಎಂದರೆ ಧರ್ಮವನ್ನು ಅನುಷ್ಠಾನ ಮಾಡಿದವರು, ತಮ್ಮಲ್ಲಿರುವುದನ್ನು ಹಂಚಿದವರು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸರ್ವರಿಗಾಗಿ ಬದುಕಿದವರು, ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ಸಾರಿದವರು. ಶರಣರ ಕಾಲವನ್ನು ಸಮಾನತೆ ಯುಗ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net