ಸಮಾನತೆ ಹರಿಕಾರ ಅಂಬೇಡ್ಕರ್

22 HBD 1
ಹುಮನಾಬಾದ್ ತಾಲೂಕಿನ ಬೋತಗಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ಉದ್ಘಾಟಿಸಿದರು. ಭಂತೆ ಧಮ್ಮಾನಂದ ಥೇರೋ, ಡಾ.ಚಂದ್ರಶೇಖರ ಪಾಟೀಲ್, ಅರವಿಂದಕುಮಾರ ಅರಳಿ, ವೀರಣ್ಣ ಪಾಟೀಲ್, ಅಬ್ದುಲ್ ಮನ್ನಾನ್ ಸೇಠ್, ಪಂಡಿತರಾವ ಚಿದ್ರಿ, ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಮಹೇಂದ್ರಕರ, ಮಲ್ಲಿಕಾರ್ಜುನ ಪ್ರಭಾ ಇತರರಿದ್ದರು.
Published on

ಹುಮನಾಬಾದ್: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಜಾತಿ ಪದ್ಧತಿ ನಿರ್ಮೂಲನೆಗೆ ಜೀವನದುದ್ದಕ್ಕೂ ಹೋರಾಡಿದ್ದಾರೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಸಿಗಬೇಕೆಂದು ಅಚಲ ಸಂಕಲ್ಪ ಹೊಂದಿದ್ದ ಜಗತ್ತಿನ ಮಹಾನ್ ಚೇತನ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ಬೋತಗಿ ಗ್ರಾಮದ ನೆಹರು ನಗರದಲ್ಲಿ ಭಾನುವಾರ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಿ ದಾರಿಯಲ್ಲಿ ನಡೆದಾಗ ಮಾತ್ರ ಅವರ ಜಯಂತಿ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮಗಳಿಗೆ ವಿಶೇಷವಾದ ಅರ್ಥ ಬರುತ್ತದೆ. ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎನ್ನುವುದು ಅಂಬೇಡ್ಕರ್ ವಿಚಾರವಾಗಿತ್ತು ಎಂದರು.

ಅಂಬೇಡ್ಕರ್ ಸಂವಿಧಾನ ರಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೂ ಶ್ರಮಿಸಿದವರು. ಶಿಕ್ಷಣ ಮತ್ತು ಸಮಾನತೆಗೆ ಹೆಚ್ಚಿನ ಒತ್ತು ನೀಡಿದ ಮಹಾನ್ ಶಿಕ್ಷಣ ಮತ್ತು ಆರ್ಥಿಕ ತಜ್ಞ ಎಂದರು.

ಆಣದೂರಿನ ಭಂತೆ ಧಮ್ಮಾನಂದ ಥೇರೋ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಪಂಡಿತರಾವ ಚಿದ್ರಿ, ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಮಹೇಂದ್ರಕರ, ಮಲ್ಲಿಕಾರ್ಜುನ ಪ್ರಭಾ, ಸುಭಾಷ ಆರ್ಯ, ಪ್ರಭು ತಾಳಮಡಗಿ, ವಿಜಯಕುಮಾರ ನಾತೆ, ಸಮಿತಿಯ ಚಂದ್ರಕಾಂತ ಮೇಲ್ದೊಡ್ಡಿ, ಹುಲೆಪ್ಪ ಠಾಕೂರ, ಬಾಬುರಾವ ಮೇಲ್ದೊಡ್ಡಿ, ಬಸವರಾಜ ಮೇಲ್ದೊಡ್ಡಿ, ಕುಪೇಂದ್ರ ಮೇಲ್ದೊಡ್ಡಿ, ಶೇಖರ ಮೇಲ್ದೊಡ್ಡಿ, ಅಭಿಷೇಕ ಭೋಲಾ, ಸಂದೀಪ ನಡುವಿನಕೇರಿ, ಸಾಗರ ಮೇಲ್ದೊಡ್ಡಿ, ಮಹಾಂತೇಶ ಬೆಳಕೇರಿ, ಸೋಮನಾಥ ಮೇಲ್ದೊಡ್ಡಿ ಇತರರಿದ್ದರು.

ಇಂದಿನ ಯುವಕರು ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಅರಿತು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಜತೆಗೆ ಅಂಬೇಡ್ಕರ್ ಅವರ ಕನಸು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

| ರಾಜಶೇಖರ ಪಾಟೀಲ್ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net