ಸಮಾನತೆ ಸಾರಿದ ನಾರಾಯಣಗುರು

01sunti01
ಸುಂಟಿಕೊಪ್ಪದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ 169ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಸತೀಶ್, ಬಿ.ಎಂ.ಮಣಿ, ವೆಂಕಪ್ಪ ಕೋಟ್ಯಾನ್ ಇತರರು ಇದ್ದರು.
Published on

ಸುಂಟಿಕೊಪ್ಪ: ಒಂದೇ ಜಾತಿ, ಮತ, ಧರ್ಮ ಎಂದು ಸಾರಿದ ನಾರಾಯಣಗುರುಗಳ ತತ್ವವನ್ನು ಎಲ್ಲರೂ ಪಾಲಿಸಬೇಕೆಂದು ಶಿಕ್ಷಕ ಸತೀಶ್ ಹೇಳಿದರು.

ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಸೇನಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ನಾರಾಯಣಗುರುಗಳ 169ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದು ಜಾತಿ ವ್ಯವಸ್ಥೆ ದ್ವಿಗುಣಗೊಂಡಿದ್ದ ಆ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ಸಾರಿದ ಮಹಾಚೇತನ, ಸುಧಾರಕ ನಾರಾಯಣಗುರುಗಳು. ಅವರ ನಿಲುವು, ವಿಚಾರಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಮಣಿ, ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಖಜಾಂಚಿ ಚಂದ್ರ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಪದಾಧಿಕಾರಿಗಳಾದ ನಾಗೇಶ್ ಪೂಜಾರಿ, ಡಾ.ಯಶೋದರ ಪೂಜಾರಿ, ಕೆ.ಪಿ.ಜಗನ್ನಾಥ್, ರಮೇಶ್ ಪೂಜಾರಿ, ಬಾಬು ಪೂಜಾರಿ, ವೀಣಾ, ಅಂಜಲಿ, ಪೂರ್ಣಿಮಾ, ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net