ಸಮಾನತೆ ಸಾಧಿಸುವವರೆಗೆ ಮೀಸಲಾತಿ ಅಗತ್ಯ

14 KAMPLI 01
Published on

ಕಂಪ್ಲಿ: ಸಾಮಾಜಿಕ ಸಮಾನತೆ ಸಾಧಿಸಿದಲ್ಲಿ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಸಿದ್ದಣ್ಣ ಪರಮೇಶ್ವರ ಹೇಳಿದರು.

ಪಟ್ಟಣದ ಬಿಎಸ್‌ವಿ ಶಾಲಾವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಸೋಮವಾರ ಉಪನ್ಯಾಸ ನೀಡಿದರು. ಸಾಮಾಜಿಕ, ಆರ್ಥಿಕ ಸಮಾನತೆ ಸಾಧಿಸುವತನಕ ಉದ್ಯೋಗದಲ್ಲಿ ಮೀಸಲು ಮುಂದುವರೆಯಬೇಕು ಎಂದರು.

ಅಂಬೇಡ್ಕರ್ ಅವರಿಗೆ ಅವಮಾನವಾದಾಗ ದಲಿತರಷ್ಟೇ ಪ್ರತಿಭಟನೆ ನಡೆಸುವಂತಾಗಿರುವುದು ವಿಪರ್ಯಾಸ. ನೋಟು, ಓಟು, ಉದ್ಯೋಗ ಅಂಬೇಡ್ಕರ್ ಕೊಡುಗೆಯಾಗಿವೆ. ದೇಶದ ಅಖಂಡತೆ, ಸುರಕ್ಷತೆಗೆ ಸಂವಿಧಾನ ಪಾಲನೆ ಅಗತ್ಯ. ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಸಿದ್ದಣ್ಣ ಪರಮೇಶ್ವರ ಹೇಳಿದರು.

ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ಸಮಾನತೆ, ಜಾತ್ಯತೀತತೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಪರಿಪಾಲಿಸಬೇಕಿದೆ ಎಂದರು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಎಚ್.ಪದ್ಮಾವತಿ, ನಾಗರತ್ನಾ, ಎಚ್.ಐಶ್ವರ್ಯಾರನ್ನು ಗೌರವಿಸಲಾಯಿತು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಉಪಾಧ್ಯಕ್ಷೆ ಜಿ.ಸುಶೀಲಮ್ಮ, ತಾಪಂ.ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪಿಐ ಕೆ.ಬಿ.ವಾಸುಕುಮಾರ್, ನಿಲಯಪಾಲಕ ಕೆ.ವಿರೂಪಾಕ್ಷಿ, ದಿಶಾ ಸಮಿತಿ ರಾಜ್ಯ ಸಮಿತಿ ಸದಸ್ಯ ಡಾ.ಎ.ಸಿ.ದಾನಪ್ಪ, ಪ್ರಮುಖರಾದ ಜಿ.ರಾಮಣ್ಣ, ಬಿ.ವಿ.ಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಕೊಟ್ಟೂರು ರಮೇಶ, ಕೆ.ಲಕ್ಷ್ಮಣ, ಹಬೀಬ್ ರೆಹಮಾನ್, ಕೆ.ಎಸ್.ಚಾಂದ್ ಬಾಷಾ, ದೇವೇಂದ್ರ, ಬಿ.ಸಿದ್ದಪ್ಪ ಇತರರಿದ್ದರು.

ಇದಕ್ಕೂ ಮುನ್ನ ಪಾಠಶಾಲೆಯಿಂದ ಆರಂಭಗೊಂಡ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಸಕ್ಕರೆ ಕಾರ್ಖಾನೆ, ಹುಲಿಗೆಮ್ಮ ಕ್ಯಾಂಪ್, ಪ್ರಭುಕ್ಯಾಂಪಿನ ಅಂಬೇಡ್ಕರ್ ಯುವಕ ಸಂಘದವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಿದರು. ಪ್ರಮುಖರಾದ ಮೇಷಕ್, ಎನ್.ಚಂದ್ರಕಾಂತರೆಡ್ಡಿ, ಸುನಿಲ್, ಪ್ರಶಾಂತ್, ಪವನ್, ನವೀನ್, ಸುಭಾಶ್, ಅಶೋಕ, ಸುರೇಶ, ಬಾಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net