ಸಮಾನತೆ, ಸಂಸ್ಕಾರ ಬಿತ್ತಿದ ವಿಎಚ್‌ಪಿ

2708klb04
Published on

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ ತಂದು ಅಸೃಷ್ಯತೆ ಹೊಡೆದೋಡಿಸಲು ವಿಶ್ವಹಿಂದು ಪರಿಷತ್ ಅಭಿಯಾನವನ್ನು ನಡೆಸಿ, ಮನೆ ಮನೆಗೆ ಪಾದಯಾತ್ರೆ ನಡೆಸಿತು. ನ ಹಿಂದು ಪತಿತೋ ಭವೆ… ಹಿಂದುಗಳಲ್ಲಿ ಯಾರೂ ಕೀಳಲ್ಲ. ಜಾತಿ ಭೇದವಿಲ್ಲ ಎಂಬ ಸಮಾನತೆಗಾಗಿ ಶ್ರಮಿಸುತ್ತಿದೆ ಎಂದು ರಾಜ್ಯ ದೇವಾಲಯ ಸಂವರ್ಧನ ಸಮಿತಿ ಸಂಯೋಜಕ ಮನೋಹರ ಮಠದ್ ಹೇಳಿದರು.
ನಗರದ ಖಮೀತಕರ್ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷತ್ ಮಹಾನಗರ ಘಟಕದಿಂದ ಕೃಷ್ಣ ಜನ್ಮಾಷ್ಟಮಿ ಮತ್ತು ವಿಶ್ವ ಹಿಂದು ಪರಿಷತ್‌ನ ಸ್ಥಾಪನಾ ದಿನದ ನಿಮಿತ್ತ ಆಯೋಜಿಸಿದ್ದ ಷಷ್ಠಿ ಪೂರ್ತಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಕ್ರಿಶ್ಚಿಯನ್ನರು, ಮುಸ್ಲಿಮರು ದಲಿತರನ್ನು ಆಮಿಷಕ್ಕೆ ಒಡ್ಡಿ ಮತಾಂತರಕ್ಕೆ ಯತ್ನಿಸಿದ್ದರು. ಆಗ ಅಂಬೇಡ್ಕರ್ ಹೇಳಿದ್ದು `ವಿದೇಶದಲ್ಲಿ ಹುಟ್ಟಿದ ಮತಕ್ಕೆ ಮತಾಂತರ ಆದರೆ ನನ್ನನ್ನು ನಾನು ಮಾರಿಕೊಂಡAತೆ' ಎಂದು. ಆದ್ದರಿಂದ ಬೌದ್ಧ ಧರ್ಮಕ್ಕೆ ಹೋದರು ಎಂದು ತಿಳಿಸಿದರು.
ಪ್ರತಿ ಹಿಂದು ಸಂಘಟಿತ ಸ್ವಾಭಿಯಾನಿಯಾಗಿ ದೇಶ, ಧರ್ಮ, ಸಂಸ್ಕೃತಿ ಉಳಿಸಲು ಶ್ರಮಿಸಬೇಕು. ಯುವ ಪೀಳಿಗೆಗೆ ಸನಾತನ ಹಿಂದು ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ೧೯೬೮ರಲ್ಲಿ ಆರಂಭವಾದ ವಿಶ್ವ ಹಿಂದು ಪರಿಷತ್ ದೇಶಧರ್ಮದ ಕಾರ್ಯದಲ್ಲಿ ತೊಡಗಿದೆ. ರಾಮ ಮಂದಿರ, ಅಮರನಾಥ ಭೂಮಿ, ರಾಮಸೇತು ಉಳಿವು, ಕಾಶಿ ಮಂದಿರ, ಅಸಮಾನತೆ ತೊಡೆಯುವ ಹೋರಾಟ ಸೇರಿ ವಿವಿಧ ಧ್ಯೇಯಗಳಲ್ಲಿ ವಿಎಚ್‌ಪಿ ಯಶಸ್ವಿಯಾಗಿದೆ ಎಂದರು.
ವಿಶ್ವದೆಲ್ಲೆಡೆ ನೆಲೆ ಕಂಡುಕೊAಡಿರುವ ಹಿಂದುಗಳ ಹಿತರಕ್ಷಣೆಗೆ ಕೆಲಸ ಮಾಡುತ್ತಿದ್ದು, ಹಿಂದು ಧರ್ಮದ ಉತ್ಥಾನಕ್ಕಾಗಿ ಶ್ರಮಿಸಬೇಕು. ಪರಿಷತ್ತಿನ ಕಾರ್ಯ ಚಟುವಟಿಕೆಗೆ ವೇಗ ನೀಡಬೇಕಿದೆ. ಹೆಚ್ಚಿನ ಪ್ರಮಾಣದಲ್ಲಿ ದುರ್ಗಾ ದೌಡ್, ದೀಪ ಹಚ್ಚುವ, ಶಿವರಾತ್ರಿ ದಿನ ಶಿವನಿಗೆ ಅಭಿಷೇಕ ಹಾಗೂ ಹನುಮ ಮಾಲಾ ಧಾರಣೆ, ಪಂಜಿನ ಮೆರವಣಿಗೆ ಸೇರಿ ಧರ್ಮ ಕಾರ್ಯ ಮಾಡೋಣ ಎಂದರು.
ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಸಂತೋಷ ಮಹಾರಾಜರು, ಶ್ರೀ ಗಜಾನನ ಬಾಬಾ ಮಹಾರಾಜರು, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಚರಲಿಂಗ ಸ್ವಾಮೀಜಿ, ಶ್ರೀ ಅಭಿನವ ಪರ್ವತೇಶ್ವರ ಸ್ವಾಮಿಜಿ, ಶ್ರೀ ಅಭಿನವ ಶಿವಾಚಾರ್ಯರು, ಶ್ರೀ ಸಿದ್ಧಗಂಗಾ ಶಿವಾಚಾರ್ಯರು, ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ದೊಡ್ಡೇಂದ್ರ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯP್ಷÀ ಲಿಂಗರಾಜಪ್ಪ ಅಪ್ಪ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುರೇಶ ಹೇರೂರ, ಜಿ¯್ಲÁಧ್ಯP್ಷÀ ರಾಜು ನವಲದಿ, ಅಶ್ವಿನ್‌ಕುಮಾರ ಡಿ, ಪ್ರಶಾಂತ ಗುಡ್ಡಾ, ಶಾಸಕ ಬಸವರಾಜ ಮತ್ತಿಮಡು, ಮಾರ್ತಾಂಡ ಶಾಸ್ತಿç, ಸುಮಂಗಲಾ ಚಕ್ರವರ್ತಿ, ವಿನಾಯಕ ಕುಲಕರ್ಣಿ, ವಾಣಿಶ್ರೀ ಮುತ್ಯಿಯಾರ, ಬಿ.ಪಿ.ರಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net