ಸಮಾನತೆ ಗೌರವಿಸದ ಕೈಗೆ ಅಧಿಕಾರ

CTD BUDDA
Published on

ಚಿತ್ರದುರ್ಗ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಗೌರವಿಸಿದವರ ಕೈಗೆ ಅಧಿಕಾರ ಚುಕ್ಕಾಣಿ ಸಿಗುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು. ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಣವಿಲ್ಲದೆ ಗ್ರಾಪಂ ಚುನಾವಣೆಯಲ್ಲೂ ಗೆಲ್ಲಲಾಗದಂತಹ ಸ್ಥಿತಿ ಇದೆ. ಕಾರ್ಪೊರೇಟ್ ಕಂಪನಿಗಳ ಅಣತೆಯಂತೆ ರಾಜಕೀಯ ಪಕ್ಷಗಳು ಕುಣಿಯುತ್ತಿವೆ ಎಂದರು. ಪ್ರಾಚಾರ್ಯೆ ಜಿ.ಎಸ್.ಸಿದ್ದಲಿಂಗಮ್ಮ, ನಿವೃತ್ತ ಎಸ್‌ಐ ಕೃಷ್ಣಪ್ಪ, ಉಪನ್ಯಾಸಕರಾದ ಇ.ನಾಗೇಂದ್ರಪ್ಪ, ಇಂದೂಧರ್ ಗೌತಮ್, ಸಚಿನ್ ಗೌತಮ್, ಶಿಕ್ಷಕಿ ಉಷಾ, ಶಾಂತಮ್ಮ, ಶಕುಂತಲಾ, ಲಕ್ಷ್ಮೀದೇವಿ, ಬನ್ನೀಕೋಟ್ ಹನುಮಂತಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಬುರುಜನರೊಪ್ಪ ಹನುಮಂತಪ್ಪ, ರಮೇಶ್, ಗಿರಿಜಾ,ಪವಿತ್ರಾ, ಅಮೃತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net