ಸಮಾನತೆ ಕ್ರಾಂತಿಯ ಕಿಚ್ಚು ಹಚ್ಚಿದ ಬಸವಣ್ಣ

1 mlv 3
ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಚನ್ನಬಸವಾನಂದ ಸ್ವಾಮೀಜಿ ಪ್ರವಚನ ನೀಡಿದರು. ಶಿವಬಸವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ವಸಂತಕುಮಾರ್, ಮಲ್ಲೇಶ್, ನಾಗರಾಜಪ್ಪ, ಪ್ರಸಾದ್, ಸುರೇಶ್, ಪಟೇಲ್ ಸುರೇಶ್, ಗಜೇಂದ್ರ, ಬಿ.ಎಂ.ಮಹೇಶ್, ಮಹದೇವ ಪ್ರಸಾದ್ ಇದ್ದರು.
Published on

ಮಳವಳ್ಳಿ: ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಶರಣ ಪರಂಪರೆಯ ಮೂಲಕ ಸಮಾನತೆ ಕ್ರಾಂತಿಯ ಕಿಚ್ಚು ಹಚ್ಚಿದವರು ಬಸವಣ್ಣ ಎಂದು ಕೂಡಲಸಂಗಮ ಚನ್ನಬಸವೇಶ್ವರ ಜ್ಞಾನ ಪೀಠದ ಬೆಂಗಳೂರು ಶಾಖಾ ಮಠದ ಪೀಠಾಧ್ಯಕ್ಷರಾದ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಮನುಕುಲದ ಸಮಾನತೆಗಾಗಿ ಬಸವೇಶ್ವರರು ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಲಿಂಗದೀಕ್ಷೆ ಮಾಡಿಸಿದ್ದರು. ಕಲ್ಯಾಣಕ್ಕೆ ಬಂದು ಆತಿಥ್ಯ ಸ್ವೀಕರಿಸಿದ್ದ ಹರಳಯ್ಯ ತೆರಳುವಾಗ ಶರಣು ಹೇಳಿದಾಗ ಬಸವಣ್ಣನವರು ಶರಣು ಶರಾಣಾರ್ಥಿಗಳು ಎಂದು ಬೀಳ್ಕೊಟ್ಟರು. ಇದರ ಋಣಭಾರ ತೀರಿಸಲೆಂದು ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿ ನೀಡಿದಾಗ ಬಸವಣ್ಣ ಆ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟು ಗೌರವ ಸಲ್ಲಿಸಿದ್ದರು. ಬಸವೇಶ್ವರರು ನೀಡಿದ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಸಾರಿದ ಸಂದೇಶವಾಗಿರುವ ಪರಿಣಾಮ ಇಂದು ವಿಶ್ವಗುರು ಎನಿಸಿಕೊಂಡಿದ್ದಾರೆ. ಇಂದಿನ ಯುವ ಸಮೂಹ ಶಿವ ಶರಣರ ಪರಂಪರೆಯನ್ನು ಅನುಸರಿಸುವ ಮೂಲಕ ಸಹ ಬಾಳ್ವೆಯ ಜೀವನ ನಡೆಸಬೇಕು ಎಂದು ಹೇಳಿದರು.

ವಿರಕ್ತ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಹಂಗ್ರಾಪುರ ಮಠದ ಬಸವಲಿಂಗ ಸ್ವಾಮೀಜಿ, ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತಕುಮಾರ್, ಚಿಂತನ ಮಂಥನ ಪದಾಧಿಕಾರಿಗಳಾದ ಮಲ್ಲೇಶ್, ನಾಗರಾಜಪ್ಪ, ಪ್ರಸಾದ್, ಸುರೇಶ್, ಮುಖಂಡರಾದ ಪಟೇಲ್ ಸುರೇಶ್, ಗಜೇಂದ್ರ, ಬಿ.ಎಂ.ಮಹೇಶ್, ಮಹದೇವ ಪ್ರಸಾದ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net