ಸಮಾನತೆ ಕ್ರಾಂತಿ ಕಿಚ್ಚು ಹಚ್ಚಿದವರು ಬಸವಣ್ಣ

ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಬೆಂಗಳೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಪ್ರವಚನ ನೀಡಿದರು. ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ವಸಂತಕುಮಾರ್, ಮಲ್ಲೇಶ್, ನಾಗರಾಜಪ್ಪ, ಪ್ರಸಾದ್, ಸುರೇಶ್, ಪಟೇಲ್ ಸುರೇಶ್, ಗಜೇಂದ್ರ, ಬಿ.ಎಂ.ಮಹೇಶ್, ಮಹದೇವಪ್ರಸಾದ್ ಇದರು.
1 mlv 3
Published on

ಮಳವಳ್ಳಿ: ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಶರಣ ಪರಂಪರೆಯ ಮೂಲಕ ಸಮಾನತೆ ಕ್ರಾಂತಿಯ ಕಿಚ್ಚನ್ನು ಹಚ್ಚಿದವರು ಬಸವಣ್ಣ ಎಂದು ಕೂಡಲಸಂಗಮ ಚನ್ನಬಸವೇಶ್ವರ ಜ್ಞಾನಪೀಠದ ಬೆಂಗಳೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.


ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ, ಸಮಾಜದ ಮನುಕುಲದ ಸಮಾನತೆಗಾಗಿ ಬಸವೇಶ್ವರರು ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಲಿಂಗದೀಕ್ಷೆ ಮಾಡಿಸಿದ್ದರು. ಕಲ್ಯಾಣಕ್ಕೆ ಬಂದು ಆತಿಥ್ಯ ಸ್ವೀಕರಿಸಿದ್ದ ಹರಳಯ್ಯ ತೆರಳುವಾಗ ಶರಣು ಹೇಳಿದಾಗ ಬಸವಣ್ಣ ಅವರು ಶರಣು ಶರಾಣಾರ್ಥಿಗಳು ಎಂದು ಬೀಳ್ಕೊಟ್ಟರು. ಇದರ ಋಣಭಾರ ತೀರಿಸಲೆಂದು ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿ ನೀಡಿದಾಗ ಬಸವಣ್ಣ ಆ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟು ಗೌರವ ಸಲ್ಲಿಸಿದ್ದರು ಎಂದು ಹೇಳಿದರು.


ಇಂತಹ ಆದರ್ಶ ಗುಣಗಳಿಂದ ಬಸವೇಶ್ವರರು ನೀಡಿದ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಸಾರಿದ ಸಂದೇಶವಾಗಿದೆ. ಹಾಗಾಗಿ ಅವರು ವಿಶ್ವಗುರು ಎನಿಸಿಕೊಂಡಿದ್ದಾರೆ. ಇಂದಿನ ಯುವ ಸಮೂಹ ಶಿವ ಶರಣರ ಪರಂಪರೆಯನ್ನು ಅನುಸಿರಿಸುವ ಮೂಲಕ ಸಹಬಾಳ್ವೆಯ ಸಂಗ ಜೀನನ ನಡೆಸಬೇಕು ಎಂದು ಕಿವಿಮಾತು ಹೇಳಿದರು.


ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಂಗ್ರಾಪುರ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತಕುಮಾರ್ (ರವಿ) ಕಾರ್ಯಕ್ರಮ ಉದ್ಘಾಟಿಸಿದರು. ಚಿಂತನ ಮಂಥನ ಪದಾಧಿಕಾರಿಗಳಾದ ಮಲ್ಲೇಶ್, ನಾಗರಾಜಪ್ಪ, ಪ್ರಸಾದ್, ಸುರೇಶ್, ಗ್ರಾಮದ ಮುಖಂಡರಾದ ಪಟೇಲ್ ಸುರೇಶ್, ಗಜೇಂದ್ರ, ಬಿ.ಎಂ.ಮಹೇಶ್, ಮಹದೇವಪ್ರಸಾದ್, ಸಂತೋಷ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net