

ಬಸವಕಲ್ಯಾಣ: ಜಾತಿ ವ್ಯವಸ್ಥೆಯನ್ನು ಅಳಿಸಿ ಸರ್ವ ಸಮಾನತೆಯನ್ನು ಕಲ್ಪಿಸಿರುವ ಬಸವ ಧರ್ಮ ಪರಿವರ್ತನೆಯಿಂದ ಕೂಡಿದ ಧರ್ಮವಾಗಿದೆ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಉದಗೀರನ ಚೌಕಿ ಮಠದಿಂದ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ೨೮ನೇ ಬಸವ ತತ್ವ ಅಧಿವೇಶನ, ಶೂನ್ಯಪೀಠಾಧೀಶ ಶ್ರೀ ಅಲ್ಲಮಪ್ರಭು ದೇವರ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಶ್ರೇಷ್ಠ ಯೋಗಿ, ಜ್ಞಾನಿ, ದಾರ್ಶನಿಕರು ಆಗಿದ್ದರು ಎಂದರು.
ಜೀವನದಲ್ಲಿ ಎಷ್ಟು ಬೇಕು ಅಷ್ಟೇ ಸಂಪಾದಿಸಬೇಕು. ಸಂಪತ್ತು ದೊಡ್ಡದಲ್ಲ ಜೀವನ ದೊಡ್ಡದು. ಬಸವಣ್ಣನವರನ್ನು ನಂಬಿದರೆ ಜೀವನದಲ್ಲಿ ಎಂದೆAದಿಗೂ ಬಡತನ ಬಾರದು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ಬಸವಣ್ಣನವರ ವಚನದ ತತ್ವ ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಅಂತರಂಗ-ಬಹಿರಂಗ ಶುದ್ಧವಾಗಿ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಚೌಕಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ವಚನ ಮತ್ತು ಪ್ರವಚನಗಳು ಕೇಳಲು ಸೀಮಿತವಾಗದೆ ಅರಿತು ಆಚರಣೆಗೆ ತಂದರೆ ಜೀವನದಲ್ಲಿ ಪರಿರ್ವತನೆ ಆಗಲಿದೆ. ಭಾವ ಶುದ್ಧಗೊಳಿಸುವ ಶಕ್ತಿ ವಚನಗಳಿಗಿದೆ. ಬಸವ ತತ್ವ ವ್ಯಾಪಕ ಪ್ರಚಾರ-ಪ್ರಸಾರವಾಗಬೇಕು ಎಂದರು.
ಬಿಳಗಿ ಕ್ರಾಸ್‌ನ ಜ್ಞಾನ ಸಿದ್ದಾಶ್ರಮದ ಶ್ರೀ ಜ್ಞಾನಾನಂದ ಸ್ವಾಮೀಜಿ, ಮಾತೋಶ್ರೀ ಸರಸ್ವತಿ ತಾಯಿ, ಜ್ಞಾನ ಭಾಸ್ಕರ್ ಪ್ರಶಸ್ತಿ ಸ್ವೀಕರಿಸಿದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಂಡಿತ ಬಾಳೂರೆ ಮಾತನಾಡಿದರು. ನಿವೃತ್ತ ಶಿಕ್ಷಕ ರಾಜಶೇಖರ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ದಿಲೀಪಕುಮಾರ ಪತಂಗೆ, ವೈಜಿನಾಥ ಚಿಲ್ಲರಗಿ, ಡಾ.ಸುವೀನ್ ಮಾಮಡಿ ಇತರರಿದ್ದರು. ಜಯಶ್ರೀ ಬಿರಾದಾರ್, ಗಿರಿಜಾ ಹಂಗರಗಿ, ಶಿಲ್ಪಾ ತೊಂಡಾರೆ ಅವರು ಬಸವ ಪೂಜೆ, ತೇಜಸ್ವಿನಿ ಬಾರಕೇರ್ ಅವರು ಅಲ್ಲಮಪ್ರಭು ಪೂಜೆ ನೆರವೇರಿಸುವರು. ರವೀಂದ್ರ ಬಿರಾದಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು. ಹಣಮಂತ ಬಾರಕೆರೆ ವಂದಿಸಿದರು.
ಹಲವರಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಜ್ಞಾನಾನಂದ ಸ್ವಾಮೀಜಿ ಅವರಿಗೆ ಕಲ್ಯಾಣ ಕರ್ನಾಟಕ ಆದರ್ಶ ಶರಣ ದಂಪತಿ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್‌ಗೆ ಜ್ಞಾನ ಭಾಸ್ಕರ್ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಗಂಗಾಂಬಿಕಾ ಮಹಾಶಕ್ತಿ ಕೂಟ ಹಾಗೂ ಅಕ್ಕನ ಬಳಗದ ಸದಸ್ಯರಿಗೆ ವಚನ ಸಾಹಿತ್ಯ ಗ್ರಂಥಗಳಿಂದ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅರಿವೆ ಗುರು ಅನುಭಾವ ಗುರಿ ಗ್ರಂಥ ಲೋಕಾರ್ಪಣೆ ಮಾಡಲಾಯಿತು.
ಉದಗೀರನ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಬಸವ ತತ್ವ ಪ್ರಚಾರ-ಪ್ರಸಾರದಲ್ಲಿ ತಮ್ಮನ್ನು ತಾವು ತೊಡಿಸಿಕೊಂಡಿದ್ದಾರೆ. ಬಸವ ತತ್ವವನ್ನು ಮನೆ-ಮನೆಗೆ ಮುಟ್ಟಿಸುವ ಮಹತ್ವದ ಕಾರ್ಯ ಅವರು ಮಾಡುತ್ತಿದ್ದಾರೆ.
| ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು