

ಹುಮನಾಬಾದ್: ಮಹಾ ಮಾನವತವಾದಿ ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದಿAದಾಗಿ ಎಲ್ಲರಿಗೂ ಸಮಾನ ಹಕ್ಕು ದೊರೆಯಲು ಸಾಧ್ಯವಾಗಿದ್ದು, ನಾವೆಲ್ಲರೂ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಮದರಗಾಂವ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆ ಘನತೆ ಗೌರವದಿಂದ ಬದುಕಲು ಸಂವಿಧಾನ ಅವಕಾಶ ಕಲ್ಪಿಸಿದೆ. ಇದರ ಆಶಯಗಳನ್ನು ಎತ್ತಿ ಹಿಡಿಯುವುದು ಎಲ್ಲರ ಕರ್ತವ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಆಣದೂರ ಬುದ್ಧ ವಿಹಾರದ ಭಂತೆ ಧಮ್ಮನಂದ ಮಹಾಥೇರೋ, ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ, ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಟ ಚೇತನ್ ಅಹಿಂಸಾ, ಪುಣೆಯ ಮಾತಾಯಿ ದಿವ್ಯಾ ಸಿಂಧೆ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಅರವಿಂದಕುಮಾರ ಅರಳಿ, ಪ್ರಮುಖರಾದ ಗಜೇಂದ್ರ ಕನಕಟಕರ್, ಅಂಕುಶ ಗೋಖಲೆ, ಲಕ್ಷ್ಮೀಪುತ್ರ ಮಾಳಗೆ, ಗೌತಮ ಸಾಗರ್, ಜಗನ್ನಾಥ ಪಾಟೀಲï, ಸಂತೋಷ ಪಾಟೀಲ್, ರವಿ ಹೊಸಳ್ಳಿ, ಅರುಣಕುಮಾರ ಬಾವಗಿ, ಗಿರೀಶ ತುಂಬಾ, ಗೋಪಾಲಕೃಷ್ಣ ಮೋಹಳೆ ಉಪಸ್ಥಿತರಿದ್ದರು.
ಮದರಗಾಂವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣದಿಂದ ಅವರ ಚಿಂತನೆಗಳನ್ನು ಇನ್ನಷ್ಟು ಅರಿಯಲು ಪ್ರೇರಣೆ ಸಿಗಲಿದೆ. ಸಂವಿಧಾನದ ಆಶಯ ಎಲ್ಲೆಡೆ ಹರಡಲಿ. ಬಾಬಾಸಾಹೇಬರ ಪ್ರಬುದ್ಧ ಭಾರತದ ಚಿಂತನೆಗಳನ್ನು ಪಸರಿಸುವ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದು ನನ್ನ ಕರ್ತವ್ಯ.
|ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ