ಸಮಾಜೋದ್ಧಾರಕ ಡಾ.ಬಸವಲಿಂಗ ಶ್ರೀ

santapur
Published on

ಔರಾದ್: ಭಾಲ್ಕಿ ಹಿರೇಮಠದ ಹಾಗೂ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಸೇರಿ ಇತ್ಯಾದಿ ರಂಗಗಳಲ್ಲಿ ಸಾಧನೆಗೈದು ಸಮಾಜೋದ್ಧಾರಕ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಸಂತಪುರ ಪಿಎಸ್‌ಐ ಮಹೆಬೂಬ್ ಅಲಿ ಹೇಳಿದರು.
ಸಂತಪುರ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಜನ್ಮದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಸುದೈವಿ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ನಮ್ಮ ನಾಡು ಶರಣರ, ಸಂತರ ಬೀಡು. ಶರಣರ ಮಾರ್ಗದಲ್ಲಿ ಜೀವನ ಸಾಗಿದರೆ ನಮ್ಮ ಬದುಕು ಸಾರ್ಥಕ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, ಮಾತೃ ಹೃದಯಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಗುಣಮಟ್ಟ ಶಿಕ್ಷಣ, ಸಮಾಜದ ಮೌಲ್ಯಗಳನ್ನು ಉಳಿಸಿ ಬೆಳೆಸುವುದರಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಸಂತಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಒಂಬತ್ತು ಸುದೈವಿ ವಿದ್ಯಾರ್ಥಿಗಳಿಗೆ ಸಮವಸ್ತç ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿ ಸೂರ್ಯಕಾಂತ ದೇಶಮುಖ, ಮಹೇಶ, ಸಂಪನ್ಮೂಲ ಶಿಕ್ಷಕ ಬಸವರಾಜ ನೇಳಗೆ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣೆ, ಈರಮ್ಮ ಕಟಗಿ, ಅಂಬಿಕಾ ವಿಶ್ವಕರ್ಮ, ವೀರಾತಾಯಿ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net