ಸಮಾಜಸೇವೆ ರೋಟರಿ ಮುಖ್ಯ ಗುರಿ

19sor1
ಸೊರಬದ ಪ್ರವಾಸಿ ಮಂದಿರದಲ್ಲಿ ವಾಹನ ಚಾಲಕರ ಸಂಘ ಮತ್ತು ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಡಾ. ಜ್ಞಾನೇಶ್ ಮಾತನಾಡಿದರು. ಕೃಷ್ಣಪ್ಪ ಓಟೂರು, ಡಾ. ನಾಗರಾಜ್, ಟಿ.ಆರ್.ಸಂತೋಷ್‌ಕುಮಾರ್ ಇತರರಿದ್ದರು.
Published on

ಸೊರಬ: ಸಮಾಜಮುಖಿ ಸೇವೆಯು ರೋಟರಿ ಸಂಸ್ಥೆಯ ಮುಖ್ಯ ಗುರಿ ಎಂದು ರೋಟರಿ ಕ್ಲಬ್ ಸೊರಬ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್, ವಾಹನ ಚಾಲಕರು ಮತ್ತು ಶಿವಮೊಗ್ಗದ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಿರುವ ಉಚಿತ ಹೃದಯ ತಪಾಸಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರೋಟರಿ ಕ್ಲಬ್ ಸ್ಥಾಪನೆ ಆಗಿರುವುದು ಸಮಾಜಮುಖಿಯಾಗಿ ಸೇವೆ ಮಾಡುವುದಕ್ಕಾಗಿ, ಕರೋನಾ ಸಂದರ್ಭ, ಪ್ರಕೃತಿ ವಿಕೋಪ ಉಂಟಾದಾಗ ಮತ್ತು ಕರೋನಾದಿಂದ ಸಾವು-ನೋವುಗಳು ಉಂಟಾದಾಗ ಸಾಂತ್ವಾನ ಹೇಳುವ ಮೂಲಕ ಸಹಾಯ ಹಸ್ತ ನೀಡುವ ಕಾರ್ಯ ಮಾಡಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಕಾರ್ಯ ಮಾಡಿದೆ. ಜು.29ರಂದು ವಾಹನ ಚಾಲಕರಿಗೆ ಉಚಿತವಾಗಿ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರೋಟರಿ ಸಂಸ್ಥೆ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಮಾಜಿ ಅಧ್ಯಕ್ಷ ಡಾ. ನಾಗರಾಜ್, ಟಿ.ಆರ್.ಸಂತೋಷ್ ಕುಮಾರ್, ರೋಟರಿ ಸಂಸ್ಥೆ ಸದಸ್ಯರಾದ ಯಶೋಧರ, ಪುನೀತ್, ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಲೇಶ್, ರಾಜು, ಮಾಜಿ ಅಧ್ಯಕ್ಷ ಮನೋಹರ್, ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net