ಸಮಾಜಸೇವಾ ಕಾರ್ಯ ಹಮ್ಮಿಕೊಳ್ಳಲು ಸಲಹೆ

15vtp1 Lions Club
ನಿವೃತ್ತ ಶಿಕ್ಷಕಿ ನೂರೇರ ಮಾಯನ್ನ ಅವರನ್ನು ಲಯನ್ಸ್ ಕ್ಲಬ್‌ನಿಂದ ಸನ್ಮಾನಿಸಲಾಯಿತು. ಲಯನ್ಸ್ ಪ್ರಾಂತಿಯ ಅಧ್ಯಕ್ಷ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಎಂ.ಎಂ.ವಿನಯ್ ಇದ್ದರು.
Published on

ವಿರಾಜಪೇಟೆ: ಲಯನ್ಸ್ ಸಂಸ್ಥೆಯ 101ನೇ ವರ್ಷಾಚರಣೆಗೆ ಸಮಾಜ ಸೇವೆಯಂತಹ ಉತ್ತಮ ಕಾರ್ಯಕ್ರಮಗಳನ್ನು ಸದಸ್ಯರು ಹೆಚ್ಚಾಗಿ ಹಮ್ಮಿಕೊ ಳ್ಳಬೇಕು ಎಂದು ಲಯನ್ಸ್ ಪ್ರಾಂತಿಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಹೇಳಿದರು.

ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಆಯೋ ಜಿಸಿದ್ದ ಸನ್ಮಾನ ಹಾಗೂ ಲಯನ್ಸ್ ಪ್ರಾಂತಿಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಜನರಿಗೆ ಹೆಚ್ಚು ಅನು ಕೂಲವಾಗುವಂತಹ ಸಮಾಜಸೇವೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು.

ಸನ್ಮಾನ ಸ್ವಿಕರಿಸಿದ ನಿವೃತ್ತ ಶಿಕ್ಷಕಿ ನೂರೇರ ಶೀಲಾ ಮಾಯಮ್ಮ ಮಾತನಾಡಿ, ಶಿಕ್ಷಕರ ಹುದ್ದೆ ಬಹಳ ಕಷ್ಟವಾಗಿದ್ದು ಹಿಂದೆ ದೂರದ ಶಾಲೆಗಳಿಗೆ ಬಸ್ಸುಗಳಿಲ್ಲದೆ ನಡೆದು ಹೋಗ ಬೇಕಾಗಿತ್ತು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಡಮಕ್ಕಳು ಒಂದು ದಿನ ಬಂದರೆ ಮರುದಿನ ರಜೆ ಮಾಡುತ್ತಿದ್ದರು. ಮಕ್ಕಳ ಮನವೊಲಿಸಿ ಶಾಲೆಗೆ ಕರೆ ತರುವ ಪರಿಸ್ಥಿತಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಅದೆಲ್ಲ ಬದಲಾಗಿ ಶಿಕ್ಷಣ ತನ್ನದೇ ಆದ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಟಿ.ನರೇಂದ್ರ ವಹಿಸಿದ್ದರು. ಲಯನ್ ವಲಯ ಅಧ್ಯಕ್ಷರಾದ ಎಂ.ಎಂ.ವಿನಯ್, ಸಲಹೆಗಾರ ಕೆ.ಆರ್.ಮೋಹನ್ ರೈ, ಕಾರ್ಯದರ್ಶಿ ಎ.ಎ.ಅಜಿತ್, ಖಜಾಂಚಿ ಬಿ.ಪಿ.ಗಣಪತಿ ಮತ್ತಿತರರು ಇದ್ದರು. ಪಿ.ಟಿ.ನರೇಂದ್ರ ಸ್ವಾಗತಿಸಿದರೆ, ಎ.ಎ.ಅಜಿತ್ ವಂದಿಸಿದರು. ಕಾರ್ಯಕ್ರಮಕ್ಕೆ ಮಡಿಕೇರಿ, ನಾಪೋಕ್ಲು, ಮುರ್ನಾಡು, ಸೋಮವಾರಪೇಟೆ, ಕುಶಾಲ ನಗರ, ಪಿರಿಯಾಪಟ್ಟಣ, ಗೋಣಿಕೊಪ್ಪ, ಪಾಲಿಬೆಟ್ಟ ಇತರೆಡೆಗಳಿಂದ ಸದಸ್ಯರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net