ಸಮಾಜಮುಖಿ ಸೇವೆಯಲ್ಲಿ ಲಯನ್ಸ್ ಕೊಡುಗೆ ಅಪಾರ : ಸಂಸ್ಥೆ ಅಧ್ಯಕ್ಷೆ ರಜನಿರಾಜ್ ಹೇಳಿಕೆ

Published on

ಮಂಡ್ಯ: ಸಮಾಜಮುಖಿ ಸೇವೆಯಲ್ಲಿ ಲಯನ್ಸ್ ಕೊಡುಗೆ ಅಪಾರ ಎಂದು ಮದ್ದೂರು ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ರಜನಿರಾಜ್ ಹೇಳಿದರು.


ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ, ಧ್ವನಿ ಲಯನ್ಸ್ ಸಂಸ್ಥೆ ವತಿಯಿಂದ ಮದ್ದೂರು ಪಟ್ಟಣದ ಸಮೀಪವಿರುವ ಆಶ್ರಯಧಾಮ ಅನಾಥಶ್ರಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಸಂಸ್ಥೆಗಳ ಸೇವಾಕಾರ್ಯ, ಸಂಘಟನೆ, ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೂ ನಾಯಕತ್ವ ಗುಣವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದರು.ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಡಾ.ನಾಗರಾಜು ವಿ.ಭೈರಿ ಮಾತನಾಡಿದರು.


ಮಳವಳ್ಳಿ ಟಿಎಚ್‌ಒ ಡಾ.ವೀರಭದ್ರಯ್ಯ, ಮದ್ದೂರು ಟಿಎಚ್‌ಒ ಡಾ.ರವೀಂದ್ರ, ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್, ವೈದ್ಯರಾದ ಡಾ.ಶೋಭಾ, ಡಾ.ಲೋಹೀತ್ ಅವರನ್ನು ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ವಕೀಲ ಎಚ್.ಮಾದೇಗೌಡ, ಸಮಾಜಸೇವಕಿ ವಿ.ವರಲಕ್ಷ್ಮೀ ಚನ್ನೇಗೌಡ, ಲಯನ್ ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜು, ವಲಯ ಅಧ್ಯಕ್ಷ ಧನಂಜಯ, ಧ್ವನಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಜಿ.ಸಿ.ನಿರಂಜನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net