ಸಮಾಜಮುಖಿ ಸತ್ಕಾರ್ಯದಿಂದ ಜ್ಞಾನದ ಬೆಳಕು

Oplus_0
ಬಸವಕಲ್ಯಾಣ ತಾಲೂಕಿನ ಕೋಹಿನೂರನ ಶ್ರೀ ಚನ್ನಮಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ಆಯೋಜಿಸಿದ್ದ ಪ್ರಶಸ್ತಿ ಸಮರ್ಪಣೆ, ಗುರುವಂದನೆ ಹಾಗೂ ೭೫೦ನೇ ತುಲಾಭಾರ ಸೇವೆ ಸಮಾರಂಭವನ್ನು ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ವೀರಣ್ಣ ಮೂಲಗೆ, ಮೇಘರಾಜ ನಾಗರಾಳೆ, ಆನಂದ ಪಾಟೀಲ್, ರಾಜಶ್ರೀ ಹಿತವಂತ, ಮಲ್ಲಿನಾಥ ಹಿರೇಮಠ, ಚಂದ್ರಕಾಂತ ಹುಸಗೆ, ಶಿವಾನಂದ ಪಾಟೀಲ, ಶಿವು ಸೆಟಗಾರ, ವೀರಣ್ಣ ಮೂಲೆಗೆ, ಶಿವಾ ಕಲೋಜಿ, ಅಪ್ಪಣ್ಣ ಜನವಾಡ ಇದ್ದರು.
Published on

ಬಸವಕಲ್ಯಾಣ: ಸಮಾಜಮುಖಿಯಾದ ಸತ್ಕಾರ್ಯಗಳನ್ನು ಮಾಡುವುದರಿಂದ ಎಲ್ಲೆಡೆ ಜ್ಞಾನದ ಬೆಳಕು ಹರಡಿ ವಿಶ್ವವೇ ಒಂದು ಪರಂಧಾಮವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಕೋಹಿನೂರ ಗ್ರಾಮಸ್ಥರಿಂದ ಶ್ರೀ ಚನ್ನಮಲ್ಲೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರಶಸ್ತಿ ಸಮರ್ಪಣೆ, ಗುರುವಂದನೆ ಹಾಗೂ ೭೫೦ನೇ ತುಲಾಭಾರ ಸೇವೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಮೂಲ್ಯ ಬದುಕಿನ ಚಿತ್ರಣ ರೂಪಿಸಿಕೊಳ್ಳುವಲ್ಲಿ ಪ್ರತಿ ಗೆರೆಯು ಕಲಾತ್ಮಕ, ತರ್ಕ ಬದ್ಧ ಹಾಗೂ ವಿವೇಕ ಪ್ರಜ್ಞೆಯಿಂದ ಕೂಡಿರಬೇಕಾಗಿರುವುದು ಅವಶ್ಯ ಎಂದು ಹೇಳಿದರು.

ಬಸವಾದಿ ಶರಣರ ಶ್ರೇಷ್ಠ ಮೌಲ್ಯಗಳಿಗೆ ಧಕ್ಕೆ ಬಾರದಂತೆ ಶುಭ್ರವಾದ, ಸರಳವಾದ ಜೀವನ ಸಾಗಿಸುವುದೇ ದೈವತ್ವದ ನೈಜ ಗುಟ್ಟು. ಸಹ ಬಾಳ್ವಿಗೆ ಹೆಸರಾದ ಭಕ್ತಿ ಪ್ರಧಾನವಾದ ಕೋಹಿನೂರ ಗ್ರಾಮ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿರುವುದು ಹೆಮ್ಮೆಯ ವಿಷಯ. ಇಂಥ ಸಾತ್ವಿಕ ಗ್ರಾಮದ  ಭಕ್ತರೆಲ್ಲರೂ ಸೇರಿ ನಮಗೆ ಸಮರ್ಪಿಸಿದ ಸಮನ್ವಯ ಸಂತ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸಿದ್ದಾಗಿ ತಿಳಿಸಿದರು.

ಅಂಬರಾಯ ಉಗಾಜಿ ಹಾರಕೂಡ ಶ್ರೀಗಳ ಸಂದೇಶ ವಾಚನ ಮಾಡಿದರು. ಓಂಕಾರ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು. ಪ್ರಮುಖರಾದ ವೀರಣ್ಣ ಮೂಲಗೆ, ಮೇಘರಾಜ ನಾಗರಾಳೆ, ರಾಜಶ್ರೀ ಹಿತವಂತ, ಮಲ್ಲಿನಾಥ ಹಿರೇಮಠ ಹಾರಕೂಡ, ಚಂದ್ರಕಾಂತ ಹುಸಗೆ, ಶಿವಾನಂದ ಪಾಟೀಲ, ಶಿವು ಸೆಟಗಾರ, ಸಂಜುಕುಮಾರ ಸುಗುರೆ, ಆನಂದ ಪಾಟೀಲ, ಶಿವಾ ಕಲೋಜಿ, ಅಂಬರೀಶ ಮೂಲಗೆ, ಸಂತೋಷ ಲಾಡುವಂತೆ, ಶಾಂತಲಿಂಗ ಬಿರಬಿಟ್ಟೆ, ಅನಿಲ ಮಣಕೋಜಿ, ಪರಶುರಾಮ ಜಡೆಗೆ, ಮಲ್ಲಿಕಾರ್ಜುನ ಹಡಪದ, ಬಲಭೀಮ ಅಣಕಲ್, ಬಸವರಾಜ ನಿಂಬಾಳೆ, ಅಂಬಾದಾಸ ಸಜ್ಜನ್, ನರಸಪ್ಪ ಜಮಾದಾರ, ಪ್ರಶಾಂತ ಲಕಮಾಜಿ ಇದ್ದರು.

ರತಿಕಾಂತ ಕೋಹಿನೂರ ಸ್ವಾಗತಿಸಿದರು. ಪ್ರಭು ಕಲೊಜಿ ಹಾಗೂ ಶರಣು ಪವಾಡಶೆಟ್ಟಿ ನಿರೂಪಣೆ ಮಾಡಿದರು. ಕರಬಸಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು ಕಾರ್ತಿಕ ಸ್ವಾಮಿ ಯಲದಗುಂಡಿ, ದಿಲೀಪಕುಮಾರ ದೇಸಾಯಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net