ಸಮಾಜಮುಖಿ ಚಿಂತನೆ ಸುಂದರ ಸಮಾಜದ ನಿರ್ಮಾಣ ಸಾಧ್ಯ

IMG-20250206-WA0000
ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ವಠಾರದಲ್ಲಿನ ಚಿನ್ನರ ಉದ್ಯಾನವನವನ್ನು ಹಿರಿಯರಾದ ದೊಡ್ಡ ಮನೆ ಸೇಸಮ್ಮ ಕೂಳೂರು ಉದ್ಘಾಟಿಸಿದರು.
Published on

ಮಂಗಳೂರು: ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರಗಳು ಮಕ್ಕಳಲ್ಲಿ ವಿಭಿನ್ನ ಶೈಲಿಯ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ. ಸ್ವಯಂಸ್ಪೂರ್ತಿ, ಆತ್ಮವಿಶ್ವಾಸ ಬೆಳೆಸುವುದೇ ಚಿನ್ನರ ಉದ್ಯಾವನ ಪ್ರಮುಖ ಉದ್ದೇಶವಾಗಿದೆ. ಯುವಜನರಲ್ಲಿ ಸಮಾಜಮುಖಿ ಚಿಂತನೆ ಮೂಡಿದಾಗ ಮಾತ್ರ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತ ಅಧ್ಯಕ್ಷ ಪಿ ದಯಾಕರ್ ಹೇಳಿದರು.

ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ವಠಾರದಲ್ಲಿ ಚಿನ್ನರ ಉದ್ಯಾನವನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಸೃಜನಶೀಲತೆ ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆಯು ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದ್ದು ಇದರಲ್ಲಿ ಚಿನ್ನರ ಉದ್ಯಾನವನವು ಒಂದಾಗಿದೆ. ಭವಿಷ್ಯತ್ತಿನ ಹರಿಕಾರರಾಗಬೇಕಾದ ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರವೇ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಜಾತಿ ಧರ್ಮಗಳು ಮಾನವೀಯತೆಗೆ ಯಾವತ್ತೂ ಅಡ್ಡಿಯಾಗಬಾರದು. ನಮ್ಮ ಗುರಿ ಮಾನವೀಯತೆ ಆಗಿರಬೇಕು. ಪರಸ್ಪರರನ್ನು ಪ್ರೀತಿಸಿದರೆ ಮಾತ್ರವೇ ಶಾಂತಿಯುತ ಸಮಾಜ ಸಾಧ್ಯ ಎಂದರು.

ಹಿರಿಯರಾದ ದೊಡ್ಡ ಮನೆ ಸೇಸಮ್ಮ ಕೂಳೂರು ಅವರು ಚಿನ್ನರ ಉದ್ಯಾನವನ ಉದ್ಘಾಟಿಸಿದರು.

ಶಾಲಾ ಆಡಳಿತ ಅಧಿಕಾರಿ ಗಣೇಶ ಅಮೀನ್ ಸಂಕಮರ್, ಸದಸ್ಯರಾದ ಭೋಜ ಅಂಚನ್ ಮದ್ಯ, ಹಿರಿಯರಾದ ಮೋನಪ್ಪ, ಶ್ರೀಮಂಜು, ಎಂ ರಮೇಶ್ ಸುರತ್ಕಲ್, ಶ್ರೀಧರ ಹೊಸಬೆಟ್ಟು, ಆನಂದ ಅಮೀನ್, ಶ್ರೀನಿವಾಸ ಕೃಷ್ಣಾಪುರ, ಎಸ್.ಎನ್ ಭಟ್, ಮುಖ್ಯ ಶಿಕ್ಷಕರು, ಪ್ರಾಚಾರ್ಯರು ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net