ಸಮಾಜಮುಖಿ ಕೆಲಸ ಮಾಡುತ್ತಿದೆ ಧರ್ಮಸ್ಥಳ ಸಂಘ

30 klr 06
ಕೋಲಾರ ಜಿಲ್ಲಾ ಕೆರೆ ಸಮಿತಿಯ ಪ್ರೇರಣಾ ಸಭೆಯನ್ನು ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆಯ ಎಲ್ಲಾ ತಾಲೂಕಿನ ಒಟ್ಟು ೨೦ ಕೆರೆ ಸಮಿತಿಯವರು ೮೦ ಜನ ಭಾಗವಹಿಸಿರುವುದು.
Published on

ಕೋಲಾರ : ಕೋಲಾರ ಜಿಲ್ಲಾ ಕೆರೆ ಸಮಿತಿಯ ಪ್ರೇರಣಾ ಸಭೆಯನ್ನು ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆಯ ಎಲ್ಲಾ ತಾಲೂಕಿನ ಒಟ್ಟು ೨೦ ಕೆರೆ ಸಮಿತಿಯವರು ೮೦ ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಸಮಿತಿಯ ಜವಾಬ್ದಾರಿ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧರ್ಮಸ್ಥಳ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲಿ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಕೆರೆಗಳನ್ನು ಹೂಳೆತ್ತುವುದು ಹಾಗೂ ಅಂತರ್ಜಲ ಸಂರಕ್ಷಣೆ, ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರು, ವಾಸಿಸಲು ಸ್ಥಳಾವಕಾಶ ಮಾಡುವುದರ ಜೊತೆಗೆ ಕೆರೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎನ್ನುವ ನುಡಿಯಂತೆ ಸಂಸ್ಥೆಯು ಕೆಲಸವನ್ನು ಮಾಡುತ್ತಿದೆ ಎಂದರು.

ಪ್ರತಿ ಕೆರೆಯ ಸಮಿತಿಗಳು ರಚನೆಯಾಗಿದ್ದು, ಇವರ ಜವಾಬ್ದಾರಿಗಳನ್ನು ವಿವರಿಸಿ, ಕೆರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಕೆರೆಗಳಿಗೆ ನೀರು ಬರುವಂತೆ ಮಾಡಿಕೊಳ್ಳುವುದು, ಕೆರೆಯ ಅಂಚಿನಲ್ಲಿ ಗಿಡ ನಾಟಿ ಮಾಡುವುದರ ಬಗ್ಗೆ ತಿಳಿಸಿದರು.

ಕೋಲಾರ ಜಿಲ್ಲಾ ನಿರ್ದೇಶಕ ಸಿ.ಹೆಚ್. ಪದ್ಮಯ, ಕೆನರಾಬ್ಯಾಂಕ್ ನಿರ್ದೇಶಕ ಯಲ್ಲೇಶ್, ಪ್ರಾದೇಶಿಕ ಕೆರೆ ಇಂಜಿನಿಯರ್ ಅರುಣ್ ಕುಮಾರ್, ಕೋಲಾರ ಯೋಜನಾಧಿಕಾರಿ ಸಿದ್ದಗಂಗಯ್ಯ ಹಾಗೂ ಸಿಬ್ಬಂದಿಗಳು ಮತ್ತು ಕೆರೆಯ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಸಮಿತಿಯವರು ಶ್ರಮದಾನ ಮಾಡಿ ಕೆರೆಯನ್ನು ಸ್ವಚ್ಛಗೊಳಿಸುವುದು, ಕೆರೆಗಳನ್ನು ದೇವಾಲಯದಂತೆ ನೋಡಿಕೊಳ್ಳುವುದು, ಕೆರೆಗೆ ಕೊಳಚೆ ನೀರು ಬಾರದಂತೆ ನೋಡಿಕೊಳ್ಳುವುದು, ಸರ್ಕಾರದ ಅನುದಾನ ಬಳಕೆ ಮಾಡಿ, ಕೋಡಿ ಮತ್ತು ತೂಬು ರಿಪೇರಿ ಮಾಡಿಕೊಳ್ಳುವುದು, ವರ್ಷಕ್ಕೊಮ್ಮೆ ಕೆರೆಯಲ್ಲಿ ಸಂಜೆಯ ಸಮಯದಲ್ಲಿ ಮಕ್ಕಳಿಗೆ ಆಟವಾಡಿಸುವ ಮೂಲಕ ಕೆರೆಯ ಬಗ್ಗೆ ಅರಿವು ಮೂಡಿಸುವುದು, ಕೆರೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡದಂತೆ ತಡೆಯುವುದು, ಸಮಿತಿಯವರು ತಮ್ಮ ಗ್ರಾಮದಲ್ಲಿ ಕೆರೆ ಕಾಮಗಾರಿ ಆದಮೇಲೆ ಕೆರೆಯಿಂದ ಆದ ಅನುಕೂಲಗಳ ಬಗ್ಗೆ ಸಭೆಯಲ್ಲಿ ತುಂಬಾ ಉತ್ತಮವಾದ ಮಾಹಿತಿಯನ್ನು ನೀಡುವುದು, ಕೃಷಿಯಲ್ಲಿ ಬದಲಾವಣೆ, ಬೋರ್ ವೆಲ್ ಜಲ ಮರುಪೂರಣ, ಜಾನುವಾರುಗಳಿಗೆ ಕುಡಿಯುವ ನೀರು ಕಾಮಗಾರಿ ಆದ ನಂತರದಿಂದ ಇದುವರೆಗೂ ಕೆರೆಯಲ್ಲಿ ನೀರೆ ಖಾಲಿ ಆಗದೆ ಇರುವ ಕುರಿತು ತಿಳಿಸಿದರು, ಈ ಪ್ರೇರಣಾ ಸಭೆಯನ್ನು ಮಾಡುವುದರಿಂದ ಸಮಿತಿಯವರು ಕೆರೆಯ ಬಗ್ಗೆ ಜವಾಬ್ದಾರಿ ತೆಗೆದುಕೊಂಡು ಅಭಿವೃಧ್ದಿ ಪಡಿಸುವುದು ಸಹಕಾರಿ ಆಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net