ಸಮಾಜಮುಖಿ ಕಾರ್ಯದಿಂದ ಸಾಧನೆ ಸಾಧ್ಯ

28MDG1
Published on

ಮುಂಡರಗಿ: ಸಮಾಜಮುಖಿ ಕಾರ್ಯಗಳಿಂದ ಮನುಷ್ಯ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಸಂಘಟನಾತ್ಮಕ ವಿಚಾರಗಳಿಂದ ಸಮಾಜದ ಮುಂಚೂಣಿಗೆ ಬರಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು.

ಪಟ್ಟಣದಲ್ಲಿ ಕಲ್ಪವೃಕ್ಷ ವಿವಿಧೋದ್ದೇಶಗಳ ಸೇವಾ ಫೌಂಡೇಷನ್ ಟ್ರಸ್ಟ್ ಮತ್ತು ಶಿವಶರಣ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಾಪಾರಸ್ಥ ರಜನಿಕಾಂತ ದೇಸಾಯಿ ಮಾತನಾಡಿ, ಎಲ್ಲರಲ್ಲೂ ಸೇವಾ ಮನೋಭಾವ ಬರಲ್ಲ. ಒಂದು ಸಮುದಾಯ ಸಣ್ಣದು ದೊಡ್ಡದು ಎನ್ನುವುದು ಮುಖ್ಯವಲ್ಲ. ಸಮುದಾಯ ಸಣ್ಣದಾಗಿದ್ದರೂ ಮನಸ್ಸು ದೊಡ್ಡದಾಗಿರುವುದು ಮುಖ್ಯವಾಗುತ್ತದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹೇಮಗಿರೀಶ ಹಾವಿನಾಳ, ರವಿ ಕರಿಗಾರ, ದಿಲೀಪಕುಮಾರ ಜೋಶಿ, ಶರಣು ಸೊಲಗಿ, ಮಂಜುನಾಥ ಜಾಗಟಗೇರಿ, ಪ್ರಕಾಶ ಅತ್ತರವಾಲ್, ಶರಣಪ್ಪ ವಾಲಿಕಾರ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ, ಕಲ್ಪವೃಕ್ಷ ವಿವಿಧೋದ್ದೇಶಗಳ ಸೇವಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ದೇವು ಹಡಪದ, ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಪುರಸಭೆ ಸದಸ್ಯ ಸಂತೋಷ ಹಿರೇಮನಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ರವಿ ಹಡಪದ, ಮಂಜುನಾಥ ಮುಧೋಳ, ನಾಗರಾಜ ಗುಡಿಮನಿ, ಮಲ್ಲೇಶ ಹರಿಜನ, ಚಿನ್ನಪ್ಪ ವಡ್ಡಟ್ಟಿ, ಶರಣಪ್ಪ ಹಡಪದ, ಶಿವಾನಂದ ಹಡಪದ, ರಾಮಣ್ಣ ಹಡಪದ, ಹನುಮಂತ ಹಡಪದ, ಅಶೋಕ ಹಡಪದ, ರಮೇಶ ಹಡಪದ, ಮಂಜುನಾಥ ಬಳಗಾನೂರ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net