ಸಮಾಜಮುಖಿ ಕಾರ್ಯಗಳಿಗೆ ಬೆಂಬಲಿಸಿ

24ss1mla mantargowda matu
Published on

ಶನಿವಾರಸಂತೆ : ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಬೆಂಬಲಿಸಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ನಿರ್ಮಿಸಿರುವ ರೋಟರಿ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಸಂಸ್ಥೆ ಸರ್ಕಾರದ ಹಲವು ಜನಮುಖಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದೆ. ಇಂಥ ಸಂಸ್ಥೆಗಳಿಗೆ ಜನಪ್ರತಿನಿಧಿಗೂ ಬೆಂಬಲ ನೀಡಬೇಕು. ಹಾಗಾಗಿ ಬಡಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸಂಸ್ಥೆಯ ಕಾರ್ಯಯೋಜನೆಗಳಿಗೆ ನನ್ನ ಬೆಂಬಲ ಇದೆ ಎಂದರು.
ರೋಟರಿ ವಲಯದ ನಿಕಟಪೂರ್ವ ಜಿಲ್ಲಾ ಸಹಾಯಕ ಪ್ರಾಂತಪಾಲ ಎಂ.ಡಿ.ಲಿಖಿತ್, ಪದಾಧಿಕಾರಿಗಳಾದ ತಮ್ಮಯ್ಯ, ಎಂ.ರಂಗನಾಥ ಭಟ್, ಪಿ.ಕೆ.ರವಿ, ಘಟಕದ ಅಧ್ಯಕ್ಷ ಎಚ್.ಆರ್.ಉದಯ್‌ಕುಮಾರ್ ಮಾತನಾಡಿದರು. ವಲಯ ಸೇನಾನಿ ಎಚ್.ಎಂ.ದಿವಾಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net