ಸಮಾಜಮುಖಿ ಕಾರ್ಯಗಳಿಂದ ನೆಮ್ಮದಿ - ಗಚ್ಚಿನಮಠದ ಶಿವಬಸವ ಶ್ರೀ

0101
Published on

ಅಥಣಿ ಗ್ರಾಮೀಣ: ಮನುಷ್ಯನಲ್ಲಿ ಸ್ವಾರ್ಥವೇ ಹೆಚ್ಚಾಗಿದ್ದು, ಧಾರ್ಮಿಕ ಆಚರಣೆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಅಥಣಿ ಗಚ್ಚಿನಮಠದ ಶಿವಬಸವ ಶ್ರೀಗಳು ಹೇಳಿದರು.

ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮ ಮನುಷ್ಯನಲ್ಲಿ ಮೌಢ್ಯ ಮತ್ತು ತಾತ್ಸಾರ ಮನೋಭಾವ ದೂರ ಮಾಡುತ್ತದೆ. ಜತೆಗೆ ವಿಶ್ವಾಸ, ಶ್ರದ್ಧೆ, ಭಕ್ತಿ ಮೂಡಿಸಿ ಎಲ್ಲರಂತೆ ನಾನೂ ಒಬ್ಬ ಎಂಬ ಭಾವನೆ ಬಿತ್ತುತ್ತದೆ. ಗಳಿಸಿದ ಹಣದಲ್ಲಿ ಒಂದಿಷ್ಟು ಧಾನ, ಧರ್ಮ ಮಾಡಬೇಕು. ಜತೆಗೆ ಒಳ್ಳೆಯ ಕಾರ್ಯಗಳಿಗೂ ಬಳಸಬೇಕು. ಅಂದಾಗ ಒಳ್ಳೆಯ ಜೀವನ ಸಾಗುತ್ತದೆ ಎಂದರು.

ಸಿದ್ಧಬಸವ ಕಬೀರ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕತೆ ಬೆಳೆದಂತೆ ಗ್ರಾಮದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು. ಬಸವರಾಜ ದೇವರು ಮಾತನಾಡಿದರು. ಶ್ರೀ ಮುರಘೇಂದ್ರ ಶಿವಯೋಗಿಗಳ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ದಾನಿಗಳನ್ನು ಸತ್ಕರಿಸಲಾಯಿತು.

ಬಾಬು ಗಲಗಲಿ, ಗುರಪ್ಪ ತೇಲಿ, ಎಂ.ಆರ್. ಗಲಗಲಿ, ನಾಗರಾಜ ಹೂಗಾರ, ಬಸವರಾಜ ಗಲಗಲಿ, ಪ್ರವೀಣ ಪತ್ತಾರ, ಎಂ.ಜಿ. ಇಟ್ನಾಳಮಠ, ವಿಜಯ ಗಲಗಲಿ, ಭೀಮು ಪೂಜಾರಿ, ರಮೇಶ ಘಟನಶೆಟ್ಟಿ, ಹಣಮಂತ ಗಲಗಲಿ ಇತರರಿದ್ದರು. ಕುಮಾರ ಜಮಖಂಡಿ ಸ್ವಾಗತಿಸಿದರು. ಬಸವರಾಜ ಗಲಗಲಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net