ಸಮಾಜಮುಖಿ ಕಾರ್ಯಕ್ಕೆ ಆದ್ಯತೆ : ನೆಲಮಂಗಲದಲ್ಲಿ ಇನ್ನರ್‌ವೀಲ್ ಜಿಲ್ಲಾಧ್ಯಕ್ಷೆ ವಿನುತಾ ಹರೀಶ್ ಅಭಯ

07 Nela Ph 02 Udgatane
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮೀಣಭಾಗದ ಮಹಿಳೆಯರು, ಮಕ್ಕಳ ಪ್ರಗತಿಗಾಗಿ ರೋಟರಿ ಇನ್ನರ್‌ವೀಲ್ ಸಂಸ್ಥೆ ಸದಾ ನೆರವು ನೀಡಲು ಸಿದ್ಧವಿದೆ ಎಂದು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ವಿನುತಾ ಹರೀಶ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯ ವಿವಿಎಸ್ ಸಮುದಾಯ ಭವನದಲ್ಲಿ ಶನಿವಾರ ರೋಟರಿ ಇನ್ನರ್ ವ್ಹೀಲ್ ಸಂಸ್ಥೆ ಆಯೋಜಿಸಿದ್ದ ಇನ್ನರ್‌ವೀಲ್ ಜಿಲ್ಲಾ ಪಾಲಕರ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಂಸ್ಥೆ ವಿಶ್ವದಾದ್ಯಂತ ಹಲವಾರು ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ಮಂದಿ ಸದಸ್ಯರನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಸಮಾಜಮುಖಿ ಕಾರ್ಯ ರೂಪಿಸಲಾಗುವುದು ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸ ಮಹಿಳಾ ಸಬಲೀಕರಣ, ಆರೋಗ್ಯ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇನ್ನರ್‌ವೀಲ್ ಸಂಸ್ಥೆ ಅಧ್ಯಕ್ಷೆ ಶಾರದಾ ಸುಂದರೇಶನ್ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ತಲುಪುತ್ತಿರುವ ರೋಟರಿ ಇನ್ನರ್‌ವೀಲ್ ತಾಲೂಕಿನಾದ್ಯಂತ ಚಿರಪರಿಚಿತವಾಗಿದೆ. ಸದಸ್ಯರ ಸಹಕಾರದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಿ, ಪುಸ್ತಕ ಇನ್ನಿತರ ಕಲಿಕಾ ಸಾಮಗ್ರಿ ಹಾಗೂ ಅನಾಥಮಕ್ಕಳ ಆಶ್ರಮಕ್ಕೆ ದಿನಸಿ, ನಿತ್ಯ ಬಳಕೆ ಮಾಡುವ ವಸ್ತು ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಪದಾರ್ಥ ವಿತರಣೆ ಮಾಡಲಾಗಿದೆ ಎಂದರು.


ಸವಲತ್ತು ವಿತರಣೆ: ಇಬ್ಬರು ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ, ನಗರದ ಅಡೇಪೇಟೆ ಶಾಲೆಗೆ ವಾಟರ್ ಫಿಲ್ಟರ್, ಸರ್ಕಾರಿ ಶಾಲೆ ಇಬ್ಬರು ವಿದ್ಯಾರ್ಥಿಗಳಿಗೆ ವೀಲ್‌ಛೇರ್ ಹಾಗೂ ತಾಲೂಕಿನ ಸೋಲದೇವನಹಳ್ಳಿಯ ಡಾ.ಎಂ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ವೀಲ್‌ಛೇರ್ ವಿತರಣೆ ಮಾಡಲಾಯಿತು. ಹಾಗೆಯೇ ಅಂತಾರಾಷ್ಟ್ರೀಯ ಕ್ರೀಡಾಪುಟು ರಾಧಿಕಾ ಅವರನ್ನು ಗೌರವಿಸಲಾಯಿತು.
ರೋಟರಿ ಇನ್ನರ್ ವ್ಹೀಲ್ ಸಂಸ್ಥೆ ಕಾರ್ಯದರ್ಶಿ ತನುಜಾಸಂತೋಷ್ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ರೇಖಾ, ಮಾಜಿ ಜಿಲ್ಲಾಧ್ಯಕ್ಷೆ ವೀಣಾನಿರಂಜನ್, ನಿರ್ದೇಶಕಿ ಮಾಳ್ವಿಕಾ, ತಾಲೂಕು ಇನ್ನರ್ ವ್ಹೀಲ್ ಖಜಾಂಚಿ ಲತಾಶಂಕರಪ್ಪ, ಐಎಸ್‌ಒ ಸರ್ವಮಂಗಳಾ, ಜಂಟಿ ಕಾರ್ಯದರ್ಶಿ ಕೋಮಲರಾಜ್, ಸಂಪಾದಕಿ ಪ್ರೇಮಾಹರೀಶ್‌ಕುಮಾರ್, ಸದಸ್ಯರಾದ ಪೂರ್ಣಿಮಾ ಸುಗ್ಗರಾಜು, ಸುಧಾಕೃಷ್ಣಪ್ಪ, ಉಮಾನಾರಾಯಣ್, ನಾಗರತ್ನಾ, ರೇಖಾ ಜಯಪ್ರಕಾಶ್, ಮಂಜುಳಾರಾಜ್, ಜಯಲಕ್ಷ್ಮೀ, ನಳಿನಾ, ಲಕ್ಷ್ಮೀದೇವಿ, ಮಾಜಿ ಅಧ್ಯಕ್ಷರಾದ ಮಂಜುಳಾ ಸಿದ್ದರಾಜು,
ಕುಸುಮಾ ರಾಜಣ್ಣ, ರೂಪಾ ಮಂಜುನಾಥ್, ರೋಟರಿ ಸಂಸ್ಥೆ ಸಂಸ್ಥಾಪಕ ಎಚ್.ಜಿ.ರಾಜು, ನಿಯೋಜಿತ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ವನರಾಜು, ಹರೀಶ್‌ಕುಮಾರ್, ಟಿ.ನಾಗರಾಜು, ಮಂಜುನಾಥ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net