

ಕೊಳ್ಳೇಗಾಲ: ಪಟ್ಟಣದ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಕಚೇರಿಯಲ್ಲಿ ಮಂಗಳವಾರ ಮಹಾಸಭೆಯ ತಾಲೂಕು ಘಟಕದಿಂದ ಡಾ.ಶ್ರೀ ಶಿವಕುಮಾರ ಶ್ರೀಗಳ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ಬಳಿಕ ಮಾತನಾಡಿದ ಮಹಾಸಭೆ ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ, ಶ್ರೀಗಳ ಪುಣ್ಯಸ್ಮರಣೆ ದಿನವನ್ನು ರಾಜ್ಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಶ್ರೀಗಳು ಸಮಾಜಮುಖಿ ಕಾರ್ಯ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಮಹಾಸಭೆಯ ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ್, ನಿರ್ದೇಶಕ ಎಸ್.ಮಹದೇವಸ್ವಾಮಿ ತಿಮ್ಮರಾಜೀಪುರ, ಮನು, ನಟರಾಜು ಜಿನಕಹಳ್ಳಿ, ಜಿಲ್ಲಾ ನಿರ್ದೇಶಕ ಇಂದ್ರೇಶ್, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಶ್ರೀ ಬಸವ ಸೇವಾ ಪತ್ತಿನ ಸೇವಾ ಸಂಘದ ಅಧ್ಯಕ್ಷ ನಂದೀಶ್, ಡಾ.ಲೋಕೇಶ್, ಮಾಜಿ ಅಧ್ಯಕ್ಷ ಮಹದೇವಪ್ರಸಾದ್, ಈಶ್ವರ್ ಮತ್ತಿತರರಿದ್ದರು.