

ಸಂಡೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಘಟಕ ಮಾಡಬೇಕೆಂಬ ಹಂಬಲ ಕಂಡುಬರುತ್ತಿದೆ. ಮಹಿಳೆಯರು ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಪಟ್ಟಣದ ವಾಲ್ಮೀಕಿ ಮಂದಿರದಲ್ಲಿ ವಾಲ್ಮೀಕಿ ಮಹಾಸಭಾ ಮಹಿಳಾ ಘಟಕ ಉದ್ಘಾಟಿಸಿ ಗುರುವಾರ ಮಾತನಾಡಿದರು. ಮಹಿಳೆಯರು ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಶ್ರಮಿಸಬೇಕು ಎಂದರು.
ಮಹಾಸಭಾ ತಾಲೂಕು ಅಧ್ಯಕ್ಷ ವದ್ದಟ್ಟಿ ಅಂಬರೀಷ, ನಗರ ಘಟಕದ ಅಧ್ಯಕ್ಷ ಪರುಶರಾಮ್, ಪ್ರಮುಖರಾದ ಸಿ.ಎಂ.ಶಿಗ್ಗಾಂವಿ, ಮಾಜಿ ಅಧ್ಯಕ್ಷ ಡಿ.ಕೃಷ್ಣಪ್ಪ, ವಾಸಣ್ಣ, ಷಾಮಿಯಾನ ಅಂಜಿನಪ್ಪ, ವಿ.ಎಸ್.ಶಂಕರ್, ಆರ್.ಪಕ್ಕೀರಪ್ಪ, ಡಿ.ಪ್ರಹ್ಲಾದ, ಟಿ.ಲಕ್ಷಣ, ನಂದಿಹಳ್ಳಿ ಮಂಜುನಾಥ, ತಿಪ್ಪಯ್ಯ, ಕುಮಾರಪ್ಪ, ತುಮಟಿ ಶ್ರೀನಿವಾಸ, ನವಲೂಟಿ ಗಂಗಣ್ಣ ಇತರರಿದ್ದರು.
ವಾಲ್ಮೀಕಿ ಮಹಾಸಭಾ ಮಹಿಳಾ ಘಟಕದ ತಾಲೂಕು ಘಟಕದ ಪದಾಧಿಕಾರಿಗಳು: ಎನ್.ಪೂರ್ಣಿಮಾ (ಅಧ್ಯಕ್ಷೆ), ಎನ್.ಜ್ಯೋತಿ, ಎನ್.ಯಶೋದಾ (ಉಪಾಧ್ಯಕ್ಷರು), ಟಿ.ಕವಿತಾ (ಪ್ರ.ಕಾರ್ಯದ ರ್ಶಿ), ನಿರ್ಮಲಾ, ಎಂ.ಎಸ್.ಪದ್ಮಾವತಿ (ಸಹ ಕಾರ್ಯದರ್ಶಿಗಳು) ಗೌರಮ್ಮ, ಕವಿತಾ (ಸಂಚಾಲಕರು), ಜಿ.ಗೌರಮ್ಮ (ಖಜಾಂಚಿ), ಆರ್.ಕವಿತಾ, ಲಕ್ಷ್ಮೀ, ಪಿ.ಶಾಂತಾ, ಶಿವರುದ್ರಮ್ಮ, ಪಾರ್ವತಿ (ಕಾರ್ಯಕಾರಿ ಸಮಿತಿ ಸದಸ್ಯರು.)