ಸಮಾಜದಲ್ಲಿ ಹೇಗೆ ಬದುಕು ನಡೆಸಬೇಕು ಎಂಬುದನ್ನು ಕಲಿಸುವುದು ಅಗತ್ಯ: ರಾಜಶೇಖರ್

ಸಮಾಜದಲ್ಲಿ ಹೇಗೆ ಬದುಕು ನಡೆಸಬೇಕು ಎಂಬುದನ್ನು ಕಲಿಸುವುದು ಅಗತ್ಯ: ರಾಜಶೇಖರ್
Published on

ಅರಸೀಕೆರೆ: ಸೇವಾ ಮನೋಭಾವನೆಯ ಜತೆಗೆ ನಾಯಕತ್ವ ಬೆಳವಣಿಗೆ ಹಾಗೂ ಸಾಮಾಜಿಕ ಮೌಲ್ಯಗಳ ಪ್ರತಿಪಾದನೆ ರಾಷ್ಟ್ರೀಯ ಸೇವಾ ಯೋಜನೆಯ ಮೊದಲ ಆದ್ಯತೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಾವಗಲ್ ರಾಜಶೇಖರ್ ಹೇಳಿದರು.

ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಚಿಕ್ಕಜ್ಜಿಕಟ್ಟೆಹಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕಾಲೇಜುಗಳಲ್ಲಿ ಪಾಠ ಬೋಧನೆಯ ಜತೆಗೆ ಸಮಾಜದಲ್ಲಿ ಹೇಗೆ ಬದುಕು ನಡೆಸಬೇಕು ಎಂಬುದನ್ನು ಕಲಿಸುವುದು ಅಗತ್ಯವಾಗಿದೆ.ನೈರ್ಮಲ್ಯ ಕಾಪಾಡುವುದು, ರಸ್ತೆ, ಚರಂಡಿ ಶುಚಿತ್ವ ಸೇರಿ ಉಪಯುಕ್ತ ಕೆಲಸ ನಿರ್ಮಿಸಲು ಶಿಬಿರಗಳ ಆಯೋಜನೆಯಿಂದ ಅನುಕೂಲವಾಗಿದೆ.ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮಾ ಗಾಂಧೀಜಿಯವರ ಕನಸಿ ಕೂಸು ಇದಾಗಿದ್ದು ಸೇವಾ ಮೋಭಾವನೆಯ ಜತೆಗೆ ನಾಯಕತ್ವ ಹಾಗೂ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜು ಪ್ರಾಂಶುಪಾಲೆ ವಿಜಯಲಕ್ಷ್ಮೀ ಮಾತನಾಡಿ,ಕರೊನಾ ಹಿನ್ನಲೆಯಲ್ಲಿ ಕಳೆದೆರಡು ವರ್ಷದಿಂದ ಶಿಬಿರ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಗ್ರಾಮಸ್ಥರ ನೆರವಿನೊಂದಿಗೆ ಏಳು ದಿನಗಳ ಕಾಲ ಸಾಮಾಜಿಕ ಚಟುವಟಿಕೆಗಳು ನಡೆಯಲಿದ್ದು ನಿಮ್ಮಗಳ ಸಹಕಾರ ಅತ್ಯಗತ್ಯ ಎಂದರು.

ಉಪನ್ಯಾಸಕರಾದ ಮಂಜುನಾಥ್,ಕುಮಾರ್,ಪಿಡಿಒ ಮಾರುತಿ ಪ್ರಸಾದ್ ಗ್ರಾಪಂ ಅಧ್ಯಕ್ಷ ಪ್ರಸನ್ನ, ಸದಸ್ಯರಾದ ಅರವಿಂದ್,ಧರ್ಮಪ್ಪ ಸೇರಿ ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net