ಸಮಾಜದಲ್ಲಿ ಸಂಸ್ಕೃತಿ ಬಿತ್ತುವ ಜಾನಪದ ಸಾಹಿತ್ಯ

13-8 ctpr 1
Published on

ಚಿತ್ತಾಪುರ: ಜಾನಪದ ಸಾಹಿತ್ಯ ಸಮಾಜದಲ್ಲಿ ಸಂಸ್ಕೃತಿ ಬಿತ್ತುವುದರ ಜತೆಗೆ ಬೆಳೆಸುವ ಕೆಲಸ ಮಾಡುತ್ತದೆ. ಅಲ್ಲದೆ ಸಂಸ್ಕಾರವAತ ವ್ಯಕ್ತಿಯನ್ನು ನಿರ್ಮಾಣ ಮಾಡುವ ಶಕ್ತಿ ಜಾನಪದಕ್ಕಿದೆ ಎಂದು ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.

ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಕಾರ್ಯಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿ, ಆಧುನಿಕತೆ ಭರಾಟೆಯಿಂದ ಇಂದು ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ. ಶಾಲೆ ಮಕ್ಕಳು ಜಾನಪದ ಸಾಹಿತ್ಯವನ್ನು ಓದಬೇಕು ಎಂದು ಸಲಹೆ ನೀಡಿದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ತಾಲೂಕು ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ಜಗದೀಶ ಚವ್ಹಾಣ್ ಮಾತನಾಡಿದರು. ಮುಖ್ಯಗುರು ಶರಣಬಸಪ್ಪ ಮಲಕೂಡ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಿಂಗಣ್ಣ ಉದನೂರ, ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆನಂದ ಪಾಟೀಲ್ ನರಬೋಳಿ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಪ್ರಮುಖರಾದ ಜಗದೇವ ದಿಗ್ಗಾಂವಕರ್, ಕಾಶೀರಾಯ ಕಲಾಲ್, ಶರಣಪ್ಪ ಕೋರವಾರ, ನರಸಪ್ಪ ಚಿನ್ನಕಟ್ಟಿ, ತಿಮ್ಮರಾಯ ಭೀಮನಹಳ್ಳಿ, ರಾಮಲಿಂಗಪ್ಪ ಕೊಲ್ಲೂರ, ದೇವಿದಾಸ ದಂಡೋತಿ, ಶ್ವೇತಾ ಪಾಟೀಲ್, ಜಯಶ್ರೀ ಅಪ್ರೋಜಿ, ಸುಲೋಚನಾ ಇತರರಿದ್ದರು.

ಮಲ್ಲಪ್ಪ ಚನ್ನಮಲ್ಲಪ್ಪ ಪ್ರಾರ್ಥಿಸಿದರು. ಬಸವರಾಜ ಎಂಬತ್ತನಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಮದನಕರ್ ನಿರೂಪಣೆ ಮಾಡಿದರು. ಹಿರಿಯ ಜಾನಪದ ಕಲಾವಿದರಾದ ಶಿವಣ್ಣ ದೊಡ್ಮನಿ, ಜಗದೇವ ಭೀಮನಹಳ್ಳಿ, ಮೀರಾನ್‌ಸಾಬ್ ಸುಲ್ತಾನ್ ದಂಡೋತಿ, ವೆಂಕಟಮ್ಮ ಪಾಲಪ್, ಶರಣಬಸಮ್ಮ ಸಂಕನೂರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net