ಸಮಾಜದಲ್ಲಿ ತಾರತಮ್ಯ ತೊಲಗಿಸುತ್ತವೆ ಜಾತ್ರೆಗಳು

23Huk2
Published on

ಹುಕ್ಕೇರಿ: ಜಾತ್ರಾ ಮಹೋತ್ಸವಗಳು ಜಾತ್ಯತೀತ ಮನೋಭಾವದ ಜತೆಗೆ ಮೇಲು-ಕೀಳು, ಬಡವ- ಬಲ್ಲಿದ ಎಂಬ ತಾರತಮ್ಯ ಹೋಗಲಾಡಿಸುತ್ತವೆ. ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಯಾದಗೂಡ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಮಾತನಾಡಿದರು. ಹುಕ್ಕೇರಿ ತಾಲೂಕು ಜಾತ್ಯತೀತ ಮನೋಭಾವಕ್ಕೆ ಹೆಸರಾಗಿದೆ. ದೇಶ ವಿವಿಧತೆಯಲ್ಲಿ ಏಕತೆ ಕಾಣುವ ಆಚಾರ, ವಿಚಾರ ಮತ್ತು ಸಂಸ್ಕೃತಿಗಳನ್ನು ಜಗತ್ತಿಗೆ ಪರಿಚಯಿಸಿದೆ. ಇದರಿಂದ ಜಗತ್ತು ನಮಗೆ ಆಧ್ಯಾತ್ಮಿಕ ತಳಹದಿಯ ರಾಷ್ಟ್ರ ಎನ್ನತ್ತಾರೆಂದರು. ಶಾಸಕರ ಜನ್ಮದಿನದ ನಿಮಿತ್ತ ಅವರನ್ನು ಹಾಗೂ ಅತಿಥಿಗಳನ್ನು ಸತ್ಕರಿಸಲಾಯಿತು.

ಮುಖಂಡರಾದ ದಿಲೀಪ ವಾಳಿಖಿಂಡಿ, ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಮಹೋತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಜನಮಟ್ಟಿ, ಉಪಾಧ್ಯಕ್ಷ ರಮೇಶ ಜನಮಟ್ಟಿ, ಸದಸ್ಯರು, ಗ್ರಾಪಂ ಉಪಾಧ್ಯಕ್ಷ ಶಿವನಗೌಡ ಪಾಟೀಲ, ರಾಜು ಗಿಡ್ಡಾಳಿ, ರಾಮಣ್ಣ ಜನಮಟ್ಟಿ, ಮಹಾದೇವ ಜನಮಟ್ಟಿ, ಸಿದ್ರಾಮ ಬಹಾದ್ದೂರಿ, ಈರಯ್ಯಾ ಹಿರೇಮಠ, ಅನಿಲ ಬಹಾದ್ದೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net