ಸಮಾಜದಲ್ಲಿ ಅನಿಷ್ಟ ಪದ್ಧತಿ ತೊಲಗಲಿ

12blrp3
ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕು ಕಚೇರಿ ಆವರಣ ಆಯೋಜಿಸಿದ್ದ ಅಸ್ಪಶ್ಯತಾ ನಿವಾರಣಾ ಆಂದೋಲನಕ್ಕೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಾನವ ಮತ್ತು ತಂಡದವರು ಬೀದಿ ನಾಟಕವನ್ನು ನಡೆಸಿಕೊಟ್ಟರು. ಎಂ.ಮಮತಾ, ಎ.ಆರ್.ಅಶೋಕ, ರಾಜೇಗೌಡ ಇತರರಿದ್ದರು.
Published on

ಬೇಲೂರು: ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಜನರು ಅಸಮಾನತೆ ಜಾತಿ, ಮತ, ಭೇದವನ್ನು ಬಿಟ್ಟು ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಸ್ಪಶ್ಯತಾ ನಿವಾರಣಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಅನೇಕ ಮಹಾನ್ ಪುರುಷರು ಜಾತೀಯತೆ ಎಂಬ ಭೂತವನ್ನು ತೊಡೆದು ಹಾಕಲು ಅವಿರತವಾಗಿ ಪ್ರಯತ್ನಪಟ್ಟರೂ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ. ಇದಕ್ಕೆ ಕಾರಣ ಜನರಲ್ಲಿರುವ ಮನಸ್ಥಿತಿ. ಇದು ಬದಲಾಗಬೇಕು. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಬೇಕು. ಆಗ ಮಾತ್ರ ನಾವು ಸುಭದ್ರವಾದ ದೇಶ ಕಟ್ಟಲು ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಅಸ್ಪಶ್ಯತಾ ನಿವಾರಣಾ ಅಭಿಯಾನವನ್ನು ಪ್ರತಿಯೊಂದು ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಅರಿವು ಮುಡಿಸುವುದಕ್ಕೆ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ಸಂಗತಿ. ಸಾರ್ವಜನಿಕರು ಈ ನಾಟಕಗಳ ಮೂಲಕ ಕಾನೂನಿನ ಅರಿವು ಮತ್ತು ಅಸ್ಪಶ್ಯತೆ ನಿವಾರಣೆಗೆ ಮುಂದಾಗಬೇಕು ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಾಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ಅಸ್ಪಶ್ಯತೆ ಎಂಬುದು ಸಮಾಜದಲ್ಲಿ ಒಂದು ಪಿಡುಗಾಗಿದೆ. ಇಂತಹ ಅನಿಷ್ಟ ಪದ್ಧತಿಗಳನ್ನು ಸಮಾಜದಿಂದ ತೊಡೆದು ಹಾಕಬೇಕು ಎಂಬ ಸಂಕಲ್ಪದೊಂದಿಗೆ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಮೂಲಕ ರಾಜ್ಯದಲ್ಲಿ ಅಸ್ಪಶ್ಯತಾ ನಿವಾರಣಾ ಆಂದೋಲನವನ್ನು ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ ದೌರ್ಜನ್ಯಗಳು ನಡೆದ ಸೂಕ್ಷ್ಮ ಸ್ಥಳದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಮಾನವ ಮತ್ತು ತಂಡದವರು ಬೀದಿ ನಾಟಕವನ್ನು ನಡೆಸಿಕೊಟ್ಟರು.

ತಹಸೀಲ್ದಾರ್ ಎಂ.ಮಮತಾ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net