ಸಮಾಜದ ಹಿತ ಕಾಪಾಡುವ ಸಾಹಿತ್ಯ ಬರಲಿ

20Anand2
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬರಹಗಾರ ಎನ್. ಗುಣಶೀಲ ರಚಿಸಿದ ಮೂರು ಕತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಪತ್ರಕರ್ತ ಎಲ್.ಎಸ್. ಶಾಸೀ, ಎನ್.ಗುಣಶೀಲ, ಆರ್.ಬಿ.ಕಟ್ಟಿ ಇತರರಿದ್ದರು.
Published on

ಬೆಳಗಾವಿ: ಸಮಾಜದ ಹಿತ ಗಮನದಲ್ಲಿಟ್ಟುಕೊಂಡು ಬರಹಗಾರರು ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳೊಂದಿಗೆ ಸಾಹಿತ್ಯ ರಚನೆ ಮಾಡಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತ ಎಲ್.ಎಸ್.ಶಾಸೀ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಮತ್ತು ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಎನ್.ಗುಣಶೀಲ ಬರೆದ ಮೂರು ಕತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದಕಾಲದಿಂದ ಇಂದಿನವರೆಗೂ ನಮ್ಮ ಕಥಾ ಸಾಹಿತ್ಯ ಬೆಳೆದು ಬಂದಿದೆ. ನಾವು ಏನನ್ನೇ ಬರೆದರೂ ಅವು ಓದುಗರ ಮನಸ್ಸನ್ನು ಕೆರಳಿಸುವಂತೆ ಅಥವಾ ಪ್ರಚೋದಿಸುವಂತೆ ಇರಬಾರದು. ಸಮಾಜಕ್ಕೆ ಒಳ್ಳೆಯದನ್ನು ನೀಡುವುದೇ ಬರಹದ ಉದ್ದೇಶವಾಗಿರಬೇಕು.

ಎನ್. ಗುಣಶೀಲ ಅವರ ಕಥೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದರು. ಡಾ.ಪಿ.ಜಿ. ಕೆಂಪಣ್ಣವರ ಮಾತನಾಡಿದರು. ಸಾಹಿತಿ ಜ್ಯೋತಿರ್ಲಿಂಗ ಹೊನಕಟ್ಟಿ ಕಪ್ಪು ಕಾಡಿನಲ್ಲೊಂದು ಬೆಳದಿಂಗಳು ಕಥಾಸಂಕಲನದ ಕುರಿತು ಮಾತನಾಡಿ ಗುಣಶೀಲ ಅವರ ಕಥೆಗಳು ಭಾವನಾತ್ಮಕ ಪ್ರಪಂಚವನ್ನು ನಿರ್ಮಿಸುವಂತಿದ್ದು, ಕಥಾಸಾಹಿತ್ಯಕ್ಕೆ ಇದೊಂದು ಒಳ್ಳೆಯ ಕೊಡುಗೆ ಎಂದು ಪ್ರಶಂಸಿಸಿದರು.

ಕೇಂದ್ರ ರಕ್ಷಣಾ ಲೆಕ್ಕ ಇಲಾಖೆ ಅಧಿಕಾರಿ ಹಾಗೂ ಬರಹಗಾರ ಎನ್.ಗುಣಶೀಲ ಮಾತನಾಡಿದರು. ಇದೇ ವೇಳೆ ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿಯ ಗೌರವ ಕಾರ್ಯದರ್ಶಿ ಆರ್.ಬಿ.ಕಟ್ಟಿ ಮೂರು ಕತಿಗಳನ್ನು ಬಿಡುಗಡೆಗೊಳಿಸಿದರು. ಮಹೇಶ ಹೆಗಡೆ, ಡಾ. ಬಸವರಾಜ ಜಗಜಂಪಿ, ಪ್ರೊ.ಎಂ.ಎಸ್.ಇಂಚಲ, ಮುರುಗೇಶ ಶಿವಪೂಜಿ, ಅಶೋಕ ಮಳಗಲಿ, ಮಮತಾ ಶಂಕರ, ಸುಧಾ ಪಾಟೀಲ, ಸುನಂದಾ ಮುಳೆ, ಚಂದ್ರಶೇಖರ ನವಲಗುಂದ ಇತರರಿದ್ದರು. ಡಾ.ಸಿ.ಕೆ. ಜೋರಾಪುರ ಸ್ವಾಗತಿಸಿದರು. ಅನಸೂಯಾ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net