ಸಮಾಜದ ಸ್ವಾಸ್ಥೃ ಕಾಪಾಡಲು ಪೊಲೀಸರಿಗೆ ಸಹಕರಿಸಿ

kdr police
ಕಾಮೇನಹಳ್ಳಿಯಲ್ಲಿ ಸಖರಾಯಪಟ್ಟಣ ಪಿಎಸ್‌ಐ ಕಿರಣ್‌ಕುಮಾರ್ ಜನರಿಗೆ ಮಾಹಿತಿ ನೀಡಿದರು. ಪ್ರಕಾಶ್, ಷಣ್ಮುಖಪ್ಪ, ತೋಟಪ್ಪ, ಕೆ.ಎಸ್.ಕುಮಾರ್ ಇತರರಿದ್ದರು.
Published on

ಕಡೂರು: ಗ್ರಾಮದಲ್ಲಿ ಯಾವುದೇ ರೀತಿಯ ಅವಘಡ, ಅಹಿತಕರ ಘಟನೆಗಳು ಸಂಭವಿಸಿದರೆ ಪೊಲೀಸರನ್ನು ಸಂಪರ್ಕಿಸಬಹುದು. ಪೊಲೀಸರು ಎಂದಾಕ್ಷಣ ಭಯಪಡುವುದು ಬೇಡ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿದೆ ಎಂದು ಸಖರಾಯಪಟ್ಟಣ ಪಿಎಸ್‌ಐ ಕಿರಣ್‌ಕುಮಾರ್ ಹೇಳಿದರು.

ಕಾಮೇನಹಳ್ಳಿಯಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ, ಮನಿ ಡಬ್ಲಿಂಗ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಪರಿಚಿತರು ಫೋನ್‌ನಲ್ಲಿ ಒಟಿಪಿ ಅಥವಾ ಲಿಂಕ್ ಕಳುಹಿಸಿ ಮಾಹಿತಿ ಅಪ್‌ಲೋಡ್ ಮಾಡುವಂತೆ ಹೇಳಿದರೆ ಯಾರೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ. ಬದಲಾಗಿ ಕರೆ ಮಾಡಿದ ನಂಬರ್ ಬಗ್ಗೆ ಪೊಲೀಸ್ ಠಾಣೆಗೆ ಕೊಡುವ ಮೂಲಕ ವಂಚನೆಗೊಳಗಾಗುವುದನ್ನು ತಪ್ಪಿಸಬೇಕು. ಹಳ್ಳಿಗಳಲ್ಲಿ ಯಾರಾದರೂ ವ್ಯಾಪಾರ ಮಾಡುವ ನೆಪದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಮಾರುವೇಷದಲ್ಲಿ ಬಂದರೆ ಅಂಥವರ ಬಗ್ಗೆಯೂ ಕೂಡಲೇ ಬೀಟ್ ಪೊಲೀಸ್ ಸಿಬ್ಬಂದಿ ಅಥವಾ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಕಾಮೇನಹಳ್ಳಿಗೆ ಅಕ್ಕಪಕ್ಕದ ತಾಲೂಕಿನಿಂದ ಬಂದು ಇಸ್ಪೀಟು ಆಡುವವರ ಸಂಖ್ಯೆ ಹೆಚ್ಚಾಗಿರುವ ಮಾಹಿತಿ ಬಂದಿದೆ. ಅಂಥವರ ಮಾಹಿತಿ ನೀಡಿ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ವಾಹನ ಚಾಲನೆ ಮಾಡುವವರು ವಾಹನಗಳಿಗೆ ವಿಮೆ ಮಾಡಿಸಿ. ವಾಹನ ಚಲಾಯಿಸುವಾಗ ಸಂಚಾರಿ ನಿಯಮ ಪಾಲಿಸಿದ. ಅದರಿಂದ ನಿಮಗೇ ಒಳಿತು ಎಂದರು.

ಗ್ರಾಪಂ ಸದಸ್ಯ ಷಣ್ಮುಖಪ್ಪ, ತೋಟಪ್ಪ, ಕೆ.ಎಸ್.ಕುಮಾರ್, ಕೆ.ಎನ್.ಲೋಕೇಶ್, ರವಿಕುಮಾರ್, ಶಂಕ್ರಪ್ಪ, ವೇದಮೂರ್ತಿ, ವಿಶ್ವನಾಥ್, ಸಖರಾಯಪಟ್ಟಣ ಠಾಣೆ ಸಿಬ್ಬಂದಿ ಪ್ರಕಾಶ್, ಭಾಸ್ಕರ್, ದಿನೇಶ್, ಸಂದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net