

ಅಫಜಲಪುರ: ರಾಜ್ಯದಲ್ಲಿ ಬಣಜಿಗ ಸಮಾಜದ ಸಂಘಟನೆ ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ಶ್ರಮಿಸಬೇಕು. ನಾನು ಎನ್ನುವುದನ್ನು ಬಿಟ್ಟು ನಾವು ಎಂದಾಗ ಮಾತ್ರ ಸಂಘಟನೆ ಉಳಿಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಅಂದಪ್ಪ ಜವಳಿ ಹೇಳಿದರು.
ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಸಂಘಟನೆಯಿಂದ ಸಮಾಜದಲ್ಲಿನ ದುರ್ಬಲರಿಗೆ ಬಲ ತುಂಬಲು ಸಾಧ್ಯವಾಗುತ್ತದೆ. ಜಾತಿ ಮನೆಯ ಹೊಸ್ತಿಲಿನಲ್ಲಿರಲಿ, ಹೊರಗೆ ಬಂದಾಗ ಜಾತ್ಯತೀತ ಮನೋಭಾವ ಹೊಂದಬೇಕು. ತಾಲೂಕಿನಲ್ಲಿ ಬಣಜಿಗ ಭವನ ನಿರ್ಮಿಸಬೇಕಿದೆ. ಕಲಬುರಗಿ, ಬೀದರ್, ಯಾದಗಿರಿ ಜಿ¯್ಲೆಗಳಲ್ಲಿ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ, ಬಣಜಿಗರು ಕುಲಕಸುಬನ್ನು ಮರೆಯಬಾರದು. ನಮ್ಮವರು ಉದ್ದಿಮೆ ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಬೇಕು. ಕರ್ನಾಟಕಕ್ಕೆ 7 ಮುಖ್ಯಮಂತ್ರಿಗಳನ್ನು ನೀಡಿದ ಸಮಾಜ ನಮ್ಮದಾಗಿದೆ. ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂದ ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಲ್ಲೇವು ಎಂಬ ಹಂಬಲ ಎಲ್ಲರಲ್ಲಿರಲಿ ಎಂದರು.
ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ರೋಡಗಿ, ಪ್ರಮುಖರಾದ ಶರಣು ನೂಲಾ, ಪ್ರಕಾಶ ಗುಣಾರಿ, ಮಲ್ಲಪ್ಪ ಗುಣಾರಿ, ಸಂತೋಷ ದಾಮಾ, ಶರಣು ಶೆಟ್ಟಿ, ಧಾನು ಫತಾಟೆ, ಶೈಲೇಶ ಗುಣಾರಿ, ಧಾನು ನೂಲಾ, ಚಂದ್ರಶೇಖರ ಕರಜಗಿ, ಕಲ್ಯಾಣಿ ಸಾಹುಕಾರ, ಶಂಕರ ಸೋಬಾನಿ, ಸಂತೋಷ ಶೆಟ್ಟಿ, ರಾಜಶೇಖರ ಪಾಟೀಲï, ಗುರುನಾಥ ಬುರಾಣಪುರ, ಜಗದೀಶ ಪಡಶೆಟ್ಟಿ, ಜಿ.ಎಸ್.ಬಾಳಿಕಾಯಿ ಇತರರಿದ್ದರು.