ಸಮಾಜದ ವೈಚಾರಿಕ ಅಂಶಗಳು ಮುನ್ನೆಲೆಗೆ

02 YERRISWAMY 02
Published on

ಬಳ್ಳಾರಿ : ಸಾಂಸ್ಕ್ರತಿಕ ಮತ್ತು ಸಾಂಪ್ರದಾಯಿಕ ಚಿಂತನೆಗಳ ಜತೆಗೆ ವೈಚಾರಿಕ ಸಮಾಜದ ಅಂಶಗಳು ಮುನ್ನೆಲೆಗೆ ಬಂದವು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಇಂಗ್ಲಿಷ್ ಹಾಗೂ ಪ್ರದರ್ಶನ ಕಲೆಯ ನಾಟಕ ವಿಭಾಗದ ಸಹಯೋಗದಲ್ಲಿ ಮಂಗಳವಾರ ನಡೆದ ಕನ್ನಡ ಭಾಷೆಯ ಏಳುಬೀಳುಗಳ ಮತ್ತು ಸಾಹಿತ್ಯದ ಸಾಂದರ್ಭಿಕ ಸವಾಲುಗಳು ಎಂಬ ವಿಷಯಗಳ ಮೇಲೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ, ಭಾಷೆ, ಪ್ರಾಂತ್ಯವಾರು ಪ್ರಾದೇಶಿಕ ವೈಶಿಷ್ಟ್ಯಗಳಿಂದ ತನ್ನದೇ ಆದ ಗಟ್ಟಿತನ ಒಳಗೊಂಡಿರುವುದರಿಂದ ಇಂದಿಗೂ ಕನ್ನಡ ಭಾಷೆ ನಿರಂತರವಾಗಿ ಮುಂದುವರೆಯುತ್ತಿದೆ. ಗಡಿಭಾಗದ ಭಾಷೆಗಳಲ್ಲಿ ದ್ವಿ ಭಾಷೆ ಪದ್ಧತಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಆಧಾರವಾಗಿರುವ ಭಾಷೆ ತಮ್ಮದೇ ಆದ ಅಸ್ತಿತ್ವಗಳೊಂದಿಗೆ ಉಳಿದುಕೊಂಡು ಬರುತ್ತಿವೆ ಎಂದರು.
ಪ್ರಮುಖರಾದ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಶಾಂತನಾಯಕ್, ಆರನಕಟ್ಟೆ ಡಾ.ರಂಗನಾಥ, ಡಾ.ವಾತ್ಸಲ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net