ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನಿಸ್ವಾರ್ಥ ಸೇವೆ ಸಲ್ಲಬೇಕು

28 ckm 10
ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಡೆದ ಜೇಸಿಐ ಚಿಕ್ಕಮಗಳೂರು ಮಲ್ನಾಡ್‌ನ ನೂತನ ಪದಗ್ರಹಣ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಸನ್ಮಾನಿಸಲಾಯಿತು. ಅನಿಲ್ ಆನಂದ್, ಸಿ.ಬಿ.ಪ್ರದೀಪ್, ಎಂ.ಎನ್.ಷಡಾಕ್ಷರಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇಸಿಐ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಜೇಸಿಐ ಚಿಕ್ಕಮಗಳೂರು ಮಲ್ನಾಡ್‌ನ ನೂತನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವರಲ್ಲಿ ಸಮಾಜಮುಖಿ ಚಿಂತನೆಯಿದ್ದರೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯ. ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾಗಿದ್ದನನ್ನು ಸಾಮೂಹಿಕವಾಗಿ ಸಂಘಟನೆಯ ಮೂಲಕ ಸಾಧಿಸಲು ಸ್ಪೂರ್ತಿ ಸಿಗುತ್ತದೆ ಎಂದರು.

ಮಾಡೆಲ್ ಆಂಗ್ಲಮಾಧ್ಯಮ ಶಾಲೆ ಪ್ರಾಚಾರ್ಯ ಎಂ.ಎನ್.ಷಡಕ್ಷರಿ ಮಾತನಾಡಿ, ಸಮಾಜಮುಖಿ ಚಿಂತನೆಗಳನ್ನೊಗೊAಡ ಉತ್ತಮ ನಾಯಕರನ್ನು ಜೇಸಿಐ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಅಭಿವೃದ್ಧಿಯಲ್ಲಿ ಎಲ್ಲಾ ಕೆಲಸಗಳನ್ನು ಸರ್ಕಾರದಿಂದಲೇ ನಿರೀಕ್ಷಿಸುವುದು ಸಾಧ್ಯವಿಲ್ಲ. ಸಂಘ-ಸAಸ್ಥೆಗಳು ನೆರವಿಗೆ ನಿಂತು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷ ಸಿ.ಬಿ.ಪ್ರದೀಪ್ ಮಾತನಾಡಿ, ಸತತ ಹನ್ನೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜೇಸಿಐ ಸಂಸ್ಥೆಗೆ ತಮ್ಮನ್ನು ಆಯ್ಕೆಗೊಳಿಸಿರುವುದು ಖುಷಿತಂದಿದೆ. ಕಾಲೇಜು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ದೇಶಭಕ್ತಿ ಕಾರ್ಯಾಗಾರ, ಸೌಕರ್ಯಗಳಿಂದ ವಂಚಿತವಾಗಿರುವ ಶಾಲೆಗೆ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗುತ್ತೇವೆೆ ಎಂದರು.

ನೂತನ ಪದಾಧಿಕಾರಿಗಳು : ಸಿ.ಬಿ.ಪ್ರದೀಪ್(ಅಧ್ಯಕ್ಷ), ಎಂ.ಎA.ತಿಲಕ್‌ದತ್ತ (ಕಾರ್ಯದರ್ಶಿ), ಸಾಗರ್ (ಉಪಾಧ್ಯಕ್ಷ), ಎಚ್.ಕೆ.ಕೃಷ್ಣಮೂರ್ತಿ (ಕಾರ್ಯಾಗಾರ ಆಯೋಜಕ), ನೀತನ್ ಡಿಸೋಜಾ (ತರಬೇತಿದಾರ), ಲೋಹಿತ್ (ಉದ್ಯಮ ತರಬೇತಿದಾರ), ಪೂರ್ಣಿಮಾ ಅನಿಲ್ (ತಂಡಗಳ ತರಬೇತಿದಾರೆ), ರೋಹಿತ್ (ಪತ್ರಿಕಾ ಸಲಹೆಗಾರ) ಹಾಗೂ ಮಮತ ಪ್ರವೀಣ್, ಇಂದ್ರೇಶ್, ಎಸ್.ಎಲ್.ಸಚಿತ್, ಗ್ರೀಶ್ಮಾ, ಎಸ್.ಎನ್. ಗುರುಮೂರ್ತಿ, ರಘು, ಅನಿಲ್‌ನಾಯ್ಕ್, ಸುರೇಂದ್ರ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಜೇಸಿಐ ಸ್ಥಾಪಕ ಅಧ್ಯಕ್ಷ ಅನಿಲ್‌ಆನಂದ್, ವಲಯಾಧ್ಯಕ್ಷ ವಿಜಯ್‌ಕುಮಾರ್, ಬಿ.ಎಂ.ಮಲ್ಲಿಕಾರ್ಜುನ್, ನಿಕಟಪೂರ್ವ ಅಧ್ಯಕ್ಷೆ ಪುಷ್ಪವಿಜಯ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net