

ರಾಮದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವಿಗೂ ಗುಣಾತ್ಮಕ ಶಿಣ ನೀಡುವುದು ಅವಶ್ಯಕವಾಗಿದ್ದು, ಸಮಾಜದ ಕಟ್ಟಕಡೆಯ ಮಗುವಿಗೂ ಉತ್ತಮ ಶಿಣ ಖಾತ್ರಿಪಡಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಶನಿವಾರ ಪಿಎಂಶ್ರೀ ಸರ್ಕಾರಿ ಶಾಲೆಯ ಎರಡು ಸ್ಮಾರ್ಟ್ಕ್ಲಾಸ್, ಎರಡು ಹೈಟೆಕ್ ನಲಿ&ಕಲಿ ತರಗತಿ ಉದ್ಘಾಟನೆ, ಪಿಎಂಶ್ರೀ ಯೋಜನೆಯ ವಿವಿಧ ಚಟುವಟಿಕೆಗಳಿಗೆ ಚಾಲನೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಿಂದ ಉಚಿತ ನೋಟ್ಬುಕ್ ಹಾಗೂ ಬ್ಯಾಗ್ ವಿತರಿಸಿ ಅವರು ಮಾತನಾಡಿದರು. ಕುನ್ನಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಾಲಕರ ವಸತಿ ನಿಲಯ, ಪ್ರೌಢಶಾಲೆ ಹಾಗೂ ಇನ್ನಿತರ ಎಲ್ಲ ಸೌಲಭ್ಯಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಪಿಎಂಶ್ರೀ ಯೋಜನೆಯ ನೋಡಲ್ ಶಿಕ ಉಮೇಶ್ವರ ಮರಗಾಲ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ಪ್ರತಾಪ ಪರಾಶರ ನೇತೃತ್ವದ ಸುಂದರ ಭಾರತ ಟ್ರಸ್ಟ್ನವರು ರಾಮದುರ್ಗ ತಾಲೂಕಿನ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ನೀಡಿರುವ ಪುಸ್ತಕ ಹಾಗೂ ಶಬ್ದಕೋಶ ಹಾಗೂ ಗ್ರಾಮದ ತುಂಗಾತಾಯಿ ಮಳಲಿ ಅವರು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು.
ಕೆಪಿಸಿಸಿ ಸದಸ್ಯ ಸುರೇಶ ಪತ್ತೇಪುರ, ಯೂತ್ ಕಾಂಗ್ರೆಸ್ ಅಧ್ಯ ಕೃಷ್ಣಗೌಡ ಪಾಟೀಲ, ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ಪಿ.ಎಂ.ಮಂಟೂರ, ಎಸ್ಡಿಎಂಸಿ ಪದಾಧಿಕಾರಿಗಳು, ದಾನಿಗಳು, ಮುಖಂಡರು, ಹಳೆಯ ವಿದ್ಯಾರ್ಥಿಗಳು, ಶಿಕ ಸಿಬ್ಬಂದಿ ಇದ್ದರು. ಎ್.ಎನ್.ಕುರಬೇಟ ಸ್ವಾಗತಿಸಿದರು. ಎಸ್.ಎ.ಕಳ್ಳಿ ವಂದಿಸಿದರು.