ಸಮಾಜದ ಒಳಿತಿಗಾಗಿ ಶ್ರಮಿಸಿ

Parishrama
Published on

ಚಿತ್ರದುರ್ಗ: ಯಾವುದೇ ಸಂಘ-ಸಂಸ್ಥೆಯಾಗಲಿ ಸಮಾಜಕ್ಕಾಗಿ ಶ್ರಮಿಸಿದಾಗ ಮಾತ್ರ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯ ಎಂದು ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪಿ.ಎಸ್.ಮಹಂತೇಶ್ ಸಲಹೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ಇತಿಹಾಸ ಕೆದಕಿದರೆ, ಅವಮಾನದಿಂದ ಸಾಧನೆ ಮಾಡಿದವರೇ ಹೆಚ್ಚಿದ್ದಾರೆ. ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.

ಸಂಸ್ಥೆ ಕಾರ್ಯದರ್ಶಿ ಎಂ.ಪರಶುರಾಮ್, ನಿರ್ದೇಶಕರಾದ ಎಚ್.ಪಿ.ಚಿದಂಬರಂ, ಎಚ್.ವಿಜಯಕುಮಾರ್, ಲಕ್ಷ್ಮಣ್, ಆರ್.ತಿಪ್ಪೇಸ್ವಾಮಿ, ಯಶೋಧರ, ವಿಜಯ್‌ಕುಮಾರ್, ಶಿವಮೂರ್ತಿ ಟಿ. ಕೋಡಿಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net