ಸಮಾಜದ ಏಳ್ಗೆಗೆ ಶ್ರಮಿಸುವಂತೆ ಸಲಹೆ

ಫೋಟೋ ಶೀರ್ಷಿಕೆ 25 ಸಿಆರ್_ಪಿ-2 ಎ
Published on

ಚನ್ನರಾಯಪಟ್ಟಣ: ಉತ್ತಮ ಅಂಕ ಗಳಿಸಿ ಉನ್ನತ ಸ್ಥಾನ ಪಡೆಯುವ ಮಕ್ಕಳು ವೈಯಕ್ತಿಕ ಲಾಭದ ಆಸೆಗೆ ಸೀಮಿತವಾಗದೆ, ಸಮಾಜದ ಏಳ್ಗೆಗೆ ಶ್ರಮಿಸಿದಾಗ ಮಾತ್ರ ನೀವು ಗಳಿಸಿದ ಅಂಕ, ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.


ಪಟ್ಟಣದ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಸಮಾರಂಭದಲ್ಲಿ ಮಾತನಾಡಿದರು.


ಪ್ರಸ್ತುತ ಸಮಾಜದಲ್ಲಿನ ತಾರತಮ್ಯವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲಿಕರಣಕ್ಕಾಗಿ ಪ್ರತಿ ವರ್ಷ ಒಂದು ಸಾವಿರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೌಶಲ್ಯ ತರಬೇತಿ ನೀಡುತ್ತ ಬಂದಿದ್ದು, ಇದರಿಂದ ಅವರ ವಿದ್ಯಾಭ್ಯಾಸದೊಂದಿಗೆ ಕೌಶಲ ನೀಡುವ ಕೆಲಸವಾಗುತ್ತಿದೆ. ಕೈಲಾದ ಸಹಕಾರದೊಂದಿಗೆ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ವಿದ್ಯಾಭಾಸಕ್ಕೆ ಸಹಾಯ ಮಾಡುತ್ತ ಬಂದಿದ್ದು, ಉತ್ತಮ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಸಾಕಷ್ಟು ಕಡೆ ಹಣಕಾಸಿನ ಸೌಲಭ್ಯ ಸಾಲದ ರೂಪದಲ್ಲಿ ಸಿಗುತ್ತಿದ್ದು, ಇದರ ಬಳಕೆಯಿಂದ ಉತ್ತಮ ಭವಿಷ್ಯ ಕಂಡುಕೊಳ್ಳುವಂತೆ ಸೂಚಿಸಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿತ್ರನಟ ಅಹಿಂಸಾ ಚೇತನ್, ಜಿಲ್ಲೆಯ ಹಿರಿಯ ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಎಸ್.ಎನ್.ಮಲ್ಲಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮಧುಕುಮಾರ್, ಕಾಂಗ್ರೆಸ್ ಮುಖಂಡರಾದ ವಡ್ಡರಹಳ್ಳಿ ಅಶೋಕ್, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷರಾದ ಲಕ್ಷ್ಮಯ್ಯ, ಸಬ್‌ರಿಜಿಸ್ಟರ್ ದೇವರಾಜ್, ಜಂಬೂರು ಜಗದೀಶ್, ಮಾನವ ಬಂದುತ್ವ ವೇದಿಕೆ ಅಧ್ಯಕ್ಷರಾದ ಕೆ.ವಿ.ಸತೀಶ್, ಬಿಎಸ್‌ಪಿ ಮುಖಂಡರಾದ ಸಿ.ಜಿ ಸೋಮಶೇಖರ್, ದಲಿತ ಮುಖಂಡ ಎಚ್.ಈ.ಜಯಣ್ಣ, ಮಧು ಸೇರಿದಂತೆ ಇತರರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net