

ಚಿತ್ರದುರ್ಗ: ಹೇಮರಡ್ಡಿ ಮಲ್ಲಮ್ಮ ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರೂ ಸಮಾಜದವರೆಲ್ಲರೂ ಸಂಘಟಿತರಾಗಬೇಕೆಂದು ರಾಜ್ಯವೀರಶೈವ ಲಿಂ ಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಸಮಾಜಬಾಂಧವರಿಗೆ ಮನವಿ ಮಾಡಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜ ನಗರದ ನೀಲಕಂಠೇಶ್ವರಸ್ವಾಮಿ ಸಮುದಾಯಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಶೈಲಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ‌್ಯ ಶ್ರೀಗಳ ಆಶಯದಂತೆ 2016ರಲ್ಲಿ ರಾಜ್ಯಾದ್ಯಂತ ಬೃಹತ್ ಜ್ಯೋತಿ ಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರ ಫಲವಾಗಿ, ಸರ್ಕಾರ ಪ್ರತಿ ವರ್ಷ ಮೇ10ರಂದು ಹೇಮರಡ್ಡಿ ಮಲ್ಲ ಮ್ಮ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ಮಲ್ಲಮ್ಮ ಅಧ್ಯಯನ ಪೀಠ ಸ್ಥಾಪನೆ ಆಯಿತು. 18ಜಿಲ್ಲೆಗಳಲ್ಲಿ ಸಮಾಜ ಅಸ್ತಿತ್ವದಲ್ಲಿದ್ದು,ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸದಸ್ಯತ್ವ ಪಡೆದುಕೊಳ್ಳಬೇಕು,ಬಡ ಪ್ರತಿಭಾವಂತ ಮಕ್ಕ ಳ ಶಿಕ್ಷಣಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಎಚ್.ಟಿ.ನಾಗಿರೆಡ್ಡಿ ಮಾತನಾಡಿ ಮಹಸಾಧ್ವಿ,ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಆದರ್ಶಗಳು ಸಮಾಜದವರಿಗೆ ಈಗ ಪ್ರೇರಣೆಯಾಗುತ್ತಿವೆ. ಆಕೆ ಜೀವನ ಚರಿತ್ರೆ,ನಡೆ,ನುಡಿ ಆದರ್ಶಗಳು ನಮಗೆ ದಾರಿದೀಪವಾಗಬೇಕಿದೆ ಎಂದರು. ಸಮಾಜದ ಜಿಲ್ಲಾ ಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದ,ನಿವೃತ್ತ ಶಾಲಾ ತನಿಖಾಧಿಕಾರಿ ಶಿವಪ್ರಸಾದ್, ಸುನಂದಮ್ಮ,ಕೆ.ಟಿ.ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.
ಗೀತಾರುದ್ರೇಶ್,ಜಯಶೀಲಾವೀರಣ್ಣ,ರಶ್ಮಿಉಮೇಶ್ ಪ್ರಾರ್ಥಿಸಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಆರ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ವಕೀಲ ಎನ್.ಬಿ.ವಿಶ್ವನಾಥ್ ವಂದಿಸಿದರು. ಸಮಾಜದ ಉಪಾಧ್ಯಕ್ಷ ನಾಗರಾಜ್ ಸಂಗಮ್ ನಿರೂಪಿಸಿದರು.