ಸಮಾಜದ ಉನ್ನತಿಗೆ ಸ್ತ್ರೀಯರ ಕೊಡುಗೆ ಅನನ್ಯ

Oplus_131072
ಬಸವಕಲ್ಯಾಣ ತಾಲೂಕಿನ ಗುಂಡೂರದಲ್ಲಿ ಏರ್ಪಡಿಸಿದ್ದ ಗುರುವಂದನೆ ಹಾಗೂ ೭೩೨ನೇ ತುಲಾಭಾರ ಕಾರ್ಯಕ್ರಮವನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಉದ್ಘಾಟಿಸಿದರು. ಪಿಎಸ್‌ಐ ಜಯಶ್ರೀ ಹೊಡೆಲ್, ರಾಧಿಕಾ ಪಾಟೀಲ, ಸುನಿತಾ ಸಿರಶೆಟ್ಟೆ, ರುಕ್ಮಿಣಿ ಮೈತ್ರೆ, ಜ್ಯೋತಿ ಸಿಂಗ್ರೆ, ಮಹಾದೇವಿ ಮಾಲ್ದೆ, ಅಂಬಿಕಾ ಮೇತ್ರೆ, ಸಂತಕ್ಕ ಸಿಂಗ್ರೆ, ಚಿತ್ರಿಕಾ ವಣಕೆ ಇದ್ದರು.
Published on

ಬಸವಕಲ್ಯಾಣ: ಸಮಾಜದ ಉನ್ನತಿಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಗುಂಡೂರ ಗ್ರಾಮದಲ್ಲಿ ಮಹಿಳಾ ಭಕ್ತರು ಶುಕ್ರವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ೭೩೨ನೇ ತುಲಾಭಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಭಾರತೀಯ ಮಹಿಳೆ ಭಾವ ಶ್ರೀಮಂತಿಕೆಯ ಗಣಿ. ಮಾನವೀಯ ಸಂಬಂಧದ ತಾಯಿ ಬೇರು. ಮಹಿಳೆ ಎಂಬ ಪದವೇ ಅಗಾಧ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ಸೂಚಿಸುತ್ತದೆ.  ಸ್ತ್ರೀಯರನ್ನು ಅತ್ಯಂತ ಗೌರವ ಹಾಗೂ ಪೂಜ್ಯನೀಯವಾಗಿ ಕಾಣುವುದು ಪುರುಷ ಧರ್ಮ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಮಾನವ ವಿಕಾಸದಲ್ಲಿ ಮಹಿಳೆ ಪಾತ್ರ ಅತ್ಯಂತ ಹಿರಿದು. ಸಹನೆ, ತಾಳ್ಮೆ, ಶಿಸ್ತು ಬದ್ಧತೆ, ಗುರುಭಕ್ತಿ, ದೈವ ಶ್ರದ್ಧೆ, ಧೈರ್ಯ, ಸಾಹಸ, ಸಾಧನಾಶೀಲತೆ, ಮಮತೆ, ವಾತ್ಸಲ್ಯ ಸ್ತ್ರೀಕುಲದ ವಿಶೇಷ. ವೇದಕಾಲದ ಗಾರ್ಗಿ, ಮೈತ್ರೇಯಿ ಅವರಿಂದ ಇಂದಿನ ಆಧುನಿಕ ಕಾಲದವರೆಗೂ ವಿಶ್ವ ವಿಕಾಸ, ಮನುಕುಲದ ಶ್ರೇಯಸ್ಸಿಗಾಗಿ ಅಸಂಖ್ಯ ಮಹಿಳೆಯರು ಅಮೂಲ್ಯ ಯೋಗದಾನ ನೀಡಿದ್ದಾರೆ ಎಂದು ಕೊಂಡಾಡಿದರು.

ಅನಸೂಯ ಸಿಂಗ್ರೆ, ರುಕ್ಮಿಣಿ ಮೈತ್ರೆ, ಜ್ಯೋತಿ ಸಿಂಗ್ರೆ, ಮಹಾದೇವಿ ಮಾಲ್ದೆ, ಅಂಬಿಕಾ ಮೇತ್ರೆ, ಸಂತಕ್ಕ ಸಿಂಗ್ರೆ, ಚಿತ್ರಿಕಾ ವಣಕೆ, ಮಹಾನಂದಾ ಮೇತ್ರೆ ಉಪಸ್ಥಿತರಿದ್ದರು. ರಾಧಿಕಾ ಪಾಟೀಲ ಸ್ವಾಗತಿಸಿದರು. ಸುನಿತಾ ಸಿರಶೆಟ್ಟಿ ವಂದಿಸಿದರು. ಭಾಗ್ಯಶ್ರೀ ಬಿರಾದಾರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಇದಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಶ್ರೀಗಳ ಅದ್ದೂರಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net