ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ

09Kush01
ಕುಶಾಲನಗರ ಇನ್ನರ್‌ವ್ಹೀಲ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸೈನಿಕ ಜಗದೀಶ್, ಡಾ.ಪ್ರತಿಭಾ, ಸರಿಗಮಪ ಸಾಧಕಿ ಪ್ರಗತಿ, ಶಿಕ್ಷಕ ಬಸವರಾಜ ಬಡಿಗೇರ್ ಅವರನ್ನು ಗೌರವಿಸಲಾಯಿತು. ನೇಹಾ ಜಗದೀಶ್, ಜಾಸ್ಮಿನ್ ಪ್ರಕಾಶ್, ಚಿತ್ರಾ ರಮೇಶ್ ಇತರರು ಹಾಜರಿದ್ದರು.
Published on

ಕುಶಾಲನಗರ: ಸಮಾಜಕ್ಕೆ ನಿಸ್ವಾರ್ಥ ಸೇವೆ ಸಮರ್ಪಿಸಲು ಸಂಘಟಿತರಾಗಿ ಕಾರ್ಯನಿರ್ವಹಿಸೋಣ ಎಂದು ಎಂದು ಕುಶಾಲನಗರ ಇನ್ನರ್‌ವ್ಹೀಲ್ ಅಧ್ಯಕ್ಷೆ ನೇಹಾ ಜಗದೀಶ್ ಹೇಳಿದರು.


ರೋಟರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ಧ್ಯೇಯಕ್ಕೆ ಬದ್ಧರಾಗಿ ಶಕ್ತಿ ಮೀರಿ ಶ್ರಮಿಸೋಣ ಎಂದರು.


ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನಮ್ಮ ಸಂಸ್ಥೆ ಸೇವೆ ಒದಗಿಸಲು ಎಲ್ಲರೂ ಸಹಕರಿಸಿ ಎಂದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ರೈ ಮಾತನಾಡಿ, ಎಲ್ಲರ ಸಹಕಾರದಿಂದ ಕಳೆದ ಸಾಲಿನಲ್ಲಿ ವಿವಿಧ ರೀತಿಯ ಸಮಾಜಮುಖಿ ಸೇವಾಕಾರ್ಯ ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದರು.

ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್ ಅವರು ಲೋಪಮುದ್ರ ಬುಲಿಟಿನ್ ಬಿಡುಗಡೆಗೊಳಿಸಿದರು. ಕ್ಲಬ್ ಉಪಾಧ್ಯಕ್ಷೆ ಚಿತ್ರಾ ರಮೇಶ್, ಸಂಸ್ಥೆಯ ನಿಕಟಪೂರ್ವ ಖಜಾಂಚಿ ದೀಪ ಪೂಜಾರಿ, ಕುಶಾಲನಗರ ರೋಟರಿ ಸಂಸ್ಥೆ ಕಾರ್ಯದರ್ಶಿ ಶಿರ್ಲಿ ಸಂತೋಷ್, ಸೋಮವಾರಪೇಟೆ ಇನ್ನರ್ ವ್ಹೀಲ್ ಕಾರ್ಯದರ್ಶಿ ತನ್ಮಯ್ ಇತರರು ಹಾಜರಿದ್ದರು. ನಿವೃತ್ತ ಯೋಧ ಜಗದೀಶ್, ಡಾ.ಪ್ರತಿಭಾ, ಸರಿಗಮಪ ಸಾಧಕಿ ಪ್ರಗತಿ, ಶಿಕ್ಷಕ ಬಸವರಾಜ ಬಡಿಗೇರ್‌ಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net