ಸಮಾಜಕ್ಕೆ ದಾರಿದೀಪ ಕೈವಾರ ತಾತಯ್ಯ

CTD 25 kivara tatarya-adc--0001
Published on

ಚಿತ್ರದುರ್ಗ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಯೋಗಿ ನಾರೇಯಣ ಯತೀಂದ್ರರು ಆಧ್ಯಾತ್ಮಿಕ ಸಾಧನೆಯೊಂದಿಗೆ ದೈವತ್ವಕ್ಕೆ ಏರಿದ ಮಹಾನ್ ಪವಾಡ ಪುರುಷ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಡಿಸಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಯೋಗಿ ನಾರಾಯಣ ಯಂತ್ರೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ‌್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಾಯಕನಹಟ್ಟಿಯಂತೆ ಕೈವಾರವೂ ಕೂಡ ಸುಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದೆ. ಸಂಸಾರ, ಸಾಮಾಜಿಕ ಜಂಜಾಟಗಳನ್ನು ಅನುಭವಿಸಿದ ನಾರೇಯಣರು, ಆಧ್ಯಾತ್ಮಕ ಸಾಧನೆ ಮೂಲಕ ಸಮಾಜಕ್ಕೆ ದಾರಿ ದೀಪವಾದರು. ಮೌಢ್ಯ, ಕಂದಾಚಾರಗಳನ್ನು ತೊಡೆದು, ಸಧೃಡ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.
ಅಪಾರ ಜ್ಞಾನಶಕ್ತಿಯಿಂದ ಕಾಲಜ್ಞಾನ ಗ್ರಂಥ ರಚಿಸಿ, ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಸಮಾಜ ಹೇಗೆ ಸಾಗಬೇಕು ಎಂಬ ಮಾಹಿತಿ ನೀಡಿದೆ ಮಹಾತ್ಮ. ನಾವೆಲ್ಲರೂ ಯತೀಂದ್ರರು ಬೋಧಿಸಿದ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಪರಸ್ಪರ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ತಿಳಿಸಿದರು.
ಕೈವಾರ ತಾತಯ್ಯರ ಕುರಿತು ನಿವೃತ್ತ ಶಿಕ್ಷಕ ಹುರುಳಿ ಬಸವರಾಜ್ ಉಪನ್ಯಾಸ ನೀಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸ್ವಾಗತಿಸಿದರು. ಬಲಿಜ ಸಮಾಜದ ಮುಖಂಡರಾದ ಎಂ.ಜೆ.ಸೂರ್ಯನಾರಾಯಣ, ನಂಜುಂಡಸ್ವಾಮಿ, ವೈ.ಹನುಮಂತಪ್ಪ, ಎಂ. ಗಂಗಣ್ಣ, ಸಿ.ಎಚ್.ಬಸವರಾಜ್, ಪ್ರಹ್ಲಾದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net