ಸಮಾಜಕ್ಕೆ ಕಾನ್ಷಿ ಫೌಂಡೇಶನ್ ಕೊಡುಗೆ

20 Raju 9
Published on

ಚಾಮರಾಜನಗರ: ಬುದ್ಧಿವಂತಿಕೆ, ದೂರದೃಷ್ಟಿತ್ವ ಮತ್ತು ತಮ್ಮಲ್ಲಿದ್ದ ಪ್ರತಿಭೆಯನ್ನು ಬರವಣಿಗೆ ಹಾಗೂ ಸಂಶೋಧನೆಗಳ ಮೂಲಕ ವಿಜಯಾ ಮಹೇಶ್ ಅವರು ಲೋಕಾರ್ಪಣೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಣ್ಣಿಸಿದರು.


ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕಾನ್ಷಿ ೌಂಡೇಶನ್ ವತಿಯಿಂದ ವಿಜಯಾ ಮಹೇಶ್ ಅವರ ಜನ್ಮದಿನದ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜಯಾ ಪ್ರಶಸ್ತಿ ಪ್ರದಾನ ಮತ್ತು ವಿಜಯಾ ಮಹೇಶ್ ಅವರ ಸಂಸ್ಮರಣಾ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎನ್.ಮಹೇಶ್ ಅವರು ಸರ್ಕಾರಿ ನೌಕರಿ ಬಿಟ್ಟು ಧ್ವನಿ ಇಲ್ಲದವರಿಗೆ ಸಮಾನತೆ ಕೊಡಬೇಕೆಂದು ಬಹುಜನ ಚಳವಳಿಯಲ್ಲಿ ಭಾಗವಹಿಸಿದಾಗ ಅವರ ರಾಜಕೀಯ ಬೆಳವಣಿಗೆಗೂ ವಿಜಯಾ ಮಹೇಶ್ ದೊಡ್ಡ ಶಕ್ತಿಯಾಗಿದ್ದರು ಎಂದು ಸ್ಮರಿಸಿದರು.


ವಿಜಯಾ ಮಹೇಶ್ ಅವರು ಹುಟ್ಟು ಹಾಕಿದ ಕಾನ್ಷಿ ೌಂಡೇಶನ್ ವತಿಯಿಂದ ಎನ್.ಮಹೇಶ್ ಕುಟುಂಬ ವಿವಿಧ ಕ್ಷೇತ್ರದ ಸಾಧಕರನ್ನು ಹುಡುಕಿ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇದೊಂದು ಅವಿಸ್ಮರಣೀಯ, ಮನಸ್ಪರ್ಶಿ ಕಾರ್ಯಕ್ರಮ ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಮಹೇಶ್ ಮಾತನಾಡಿ, 2016ರಿಂದೀಚೆಗೆ ಕೇಂದ್ರ ಸರ್ಕಾರ ಪ್ರತಿಭೆಗಳನ್ನು ಹುಡುಕಿ ಪ್ರಶಸ್ತಿಗಳನ್ನು ನೀಡುತ್ತಿದೆ. ಅದಕ್ಕಿಂತ ಹಿಂದಿನ ಸರ್ಕಾರಗಳು ಬೇಕಾದವರಿಗೆ ಪದ್ಮಶ್ರೀ, ಪದ್ಮವಿಭೂಷಣ, ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದವು. ಪ್ರತಿಭೆಗಳನ್ನು ಹೆಕ್ಕಿ ಪ್ರಶಸ್ತಿಗಳನ್ನು ತೆಗೆದು ಕೊಡಬೇಕೆಂದರು ಪತ್ನಿ ವಿಜಯಾ ಜೀವಿತ ಸಂದರ್ಭದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರಿನ ವಿಜಯಾ ಪ್ರಶಸ್ತಿಯನ್ನು ಕಾನ್ಷಿ ೌಂಢೇಶನ್ ಐವರು ಪ್ರತಿಭೆಗಳನ್ನು ಹುಡುಕಿ ನೀಡಿದೆ. ಇದು ನಿಜವಾಗಿ ನೀಡುವ ಪ್ರಶಸ್ತಿ ಎಂದರು.


ವಿಜಯಾ ಮಹೇಶ್ ಅವರ ಸಂಸ್ಕರಣಾ ಪುಸ್ತಕ ಬಿಡುಗಡೆಗೊಳಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ದಲಿತರಿಗೆ ಶಿಕ್ಷಣವೇ ಆಸ್ತಿ. ಸಂಘಟಿತರಾದರೆ ಮಾತ್ರ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯ. ಇದು ನಮ್ಮ ಗುರಿಯಾಗಬೇಕು. ಕಾನ್ಷಿರಾಂ ಅವರು ಶೈಕ್ಷಣಿಕವಾಗಿ ಎಲ್ಲವನ್ನೂ ತಿಳಿದುಕೊಂಡಿದ್ದರಿಂದ ಬಹಳ ಎದೆಗಾರೆಕೆ ಹೊಂದಿದ್ದರು. ಹಾಗಾಗಿ, ಅವರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಕಾನ್ಷಿ ೌಂಢೇಶನ್ ವಿಜಯಾ ಮಹೇಶ್ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣ ಎಂದು ತಿಳಿಸಿದರು.


ಬಹುಭಾಷಾ ಚಿತ್ರನಟ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿನಾಶ್, ರಾಜ್ಯೋತ್ಸವ ಪಶಸ್ತಿ ಪುರಸ್ಕೃತೆ ಸೋಲಿಗರ ಮಾದಮ್ಮ, ತಬಲ ಕಲಾವಿದ ಎ.ವಿ.ದಶಪಾಲ್, ಚಿತ್ರ ಕಲಾವಿದ ಹರೀಶ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಿ.ನರಸೀಪುರದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಳಂದ ಬುದ್ಧ ವಿಹಾರದ ಬೋದಿರತ್ನ ಭಂತೇಜಿ, ಮಕ್ಕಾ ಮಸೀದಿ ಧರ್ಮಗುರು ಮೌಲಾನ ಮಹಮ್ಮದ್ ಇಸ್ಮಾಯಿಲ್, ಸಂತ ಪೌಲ್ ಚರ್ಚ್ ಾದರ್ ಅಂತೋಣಪ್ಪ ಸಾನ್ನಿಧ್ಯ ವಹಿಸಿದ್ದರು. ಕಾನ್ಷಿ ೌಂಡೇಶನ್‌ನ ರಚನಾ ಅರ್ಜುನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಗಾಯಕರು ವಿಜಯಾ ಯಾತ್ರೆ ಮುಗಿಸಿದ ಹಾಡು ಹಾಡುತ್ತಿದ್ದಂತೆ ಶಾಸಕ ಎನ್.ಮಹೇಶ್ ಭಾವುಕರಾದರು.

ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್, ಕಾನ್ಷಿ ೌಂಡೇಶನ್‌ನ ಅರ್ಜುನ್ ಮಹೇಶ್, ಎಚ್.ಕೆ.ದೇವದಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಎಎಸ್ಪಿ ಕೆ.ಎಸ್.ಸುಂದರ್ ರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net