ಸಮಾಜ ಸೇವೆಯೇ ಲಯನ್ಸ್ ಗುರಿ

11 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಯನ್ಸ್ ಕ್ಲಬ್ ಧಾರವಾಡದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನೆರವೇರಿತು.
ಕ್ಲಬ್‌ನ 2023-24ನೇ ಸಾಲಿನ ಅಧ್ಯಕ್ಷರಾಗಿ ಶೈಲಾ ಕರಿಗುದರಿ, ಕಾರ್ಯದರ್ಶಿಯಾಗಿ ಡಾ. ಅನಿರುದ್ಧ ಕುಲಕರ್ಣಿ, ಕೋಶಾಧ್ಯಕ್ಷರಾಗಿ ಡಾ. ಉಷಾ ಗದ್ದಗಿಮಠ ಅವರು ನಿಕಟಪೂರ್ವ ಅಧ್ಯಕ್ಷ ಭುಜಂಗಶೆಟ್ಟಿ, ಕಾರ್ಯದರ್ಶಿ ಆನಂದ ಕಮಲಾಪುರ, ಕೋಶಾಧ್ಯಕ್ಷ ನಮ್ರತಾ ಪಾಟೀಲ ಅವರಿಂದ ಅಧಿಕಾರ ಸ್ವೀಕರಿಸಿದರು.
ಪದಗ್ರಹಣ ಸಮಾರಂಭ ಉದ್ಘಾಟಿಸಿದ ಮಾಜಿ ಜಿಲ್ಲಾಧ್ಯಕ್ಷ ಶ್ರೀನಿವಾಸ ಶಿವಣಗಿ ಮಾತನಾಡಿ, ಸಮಾಜ ಸೇವೆಯೇ ಲಯನ್ಸ ಕ್ಲಬ್ ಪರಮೋಚ್ಚ ಗುರಿ. ಹೀಗಾಗಿ ಸಮಾಜ ಸೇವೆ ಮಾಡಬೇಕು ಎಂಬ ಸೇವಾ ಮನೋಭಾವ ಉಳ್ಳವರು ಮಾತ್ರ ಕ್ಲಬ್ ಸೇರಬೇಕು ಎಂದರು.
ನೂತನ ಅಧ್ಯಕ್ಷೆ ಶೈಲಾ ಕರಿಗುದರಿ ಮಾತನಾಡಿ, ಮುಂಬರುವ ವರ್ಷದಲ್ಲಿ ಅನೇಕ ವಿಭಿನ್ನ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ವಿನೂತನವಾಗಿ ಕಾರ್ಯ ನಿರ್ವಹಿಸುವ ಉದ್ದೇಶ ಇದೆ. ಇಂತಹ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಹರ್ಷ ದೇಸಾಯಿ, ಆರತಿ ಕಮಲಾಪುರ, ಗಿರಿಧರ ದೇಸಾಯಿ, ಅಶ್ವಿನಿ ಕೊಪ್ಪಿಕರ, ಉಷಾ ದೇಸಾಯಿ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಅಶೋಕ ಬಾಗಿ, ಇತರರು ಇದ್ದರು. ಆನಂದ ಕಮಲಾಪುರ 2022-23ನೇ ಸಾಲಿನ ವರದಿ ವಾಚಿಸಿದರು. ಲಯನ್ ಮುಕುಂದ ಹೆಬ್ಳೀಕರ ಧ್ವಜ ವಂದನೆ ಸಲ್ಲಿಸಿದರು. ಕವಿತಾ ಅಂಗಡಿ, ಮೀರಾರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net