ಸಮಾಜ ಸೇವೆಯಿಂದ ನೆಮ್ಮದಿ ಸಾಧ್ಯ

11GKK1
ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್, ತಾಲೂಕು ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಕಾರ್ಯದರ್ಶಿ ಶ್ರೀಶೈಲ ಹಂಜಿ, ದೀಪಾ ಬೆಲ್ಲದ, ಎಂಜೆಎಫ್ ಲಯನ್ ವಕೀಲ ಗುರುದೇವ ಸಿದ್ಧಾಪುರಮಠ, ಡಾ. ಅಶೋಕ ಪಾಟೀಲ, ಶೈಲಜಾ ಕೊಕರಿ, ಡಾ. ರಮೇಶ ಪಟಗುಂದಿ ಇತರರು ಇದ್ದರು.
Published on

ಗೋಕಾಕ: ಸಮಾಜ ಸೇವೆ ಮಾಡುವ ಮೂಲಕ ಮನಸ್ಸಿಗೆ ದೊರೆಯುವ ನೆಮ್ಮದಿ ಇತರೆಲ್ಲ ನೆಮ್ಮದಿಗಳಿಗಿಂತ ವಿಭಿನ್ನ ಎಂದು ಗದಗ ಜಿಲ್ಲಾ ಲಯನ್ಸ್ ಕ್ಲಬ್‌ನ ಲಯನ್ ಸುಗಲಾ ಯಲಮಳ್ಳಿ ಹೇಳಿದರು.

ಇಲ್ಲಿನ ಯೋಗಿಕೊಳ್ಳ ರಸ್ತೆಯ ಸ್ಪೈಸ್ ಗಾರ್ಡನ್‌ನಲ್ಲಿ ಭಾನುವಾರ ಜರುಗಿದ ಲಯನ್ಸ್ ಕ್ಲಬ್ ಗೋಕಾಕ ಇದರ 43ನೇ ವಾರ್ಷಿಕ ಪದಾಧಿಕಾರಿಗಳ
ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆ ಕಳೆದ 43 ವರ್ಷಗಳಲ್ಲಿ ಮಾಡಿದ ಜನಸೇವೆ ಶ್ಲಾಘನೀಯ ಎಂದರು.
ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜಿಲ್ಲಾ ನಿವೃತ್ತ ಸರ್ಜನ್ ಡಾ. ಅಶೋಕ ಮುರಗೋಡ, ಕಾರ್ಯದರ್ಶಿಯಾಗಿ ಮಹೇಂದ್ರ ಪೋರ‌್ವಾಲ್ ಮತ್ತು ಖಜಾಂಚಿಯಾಗಿ ಚಾರ್ಟ್‌ರ್ಡ್ ಅಕೌಂಟಂಟ್ ಪುರುಷೋತ್ತಮ ಬಾಫನಾ ಮತ್ತು ತಂಡ ಅಧಿಕಾರ ಗ್ರಹಣ ಮಾಡಿತು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವೈದ್ಯ ಡಾ. ಅಶೋಕ ಮುರಗೋಡ ಮಾತನಾಡಿ, ಕ್ಲಬ್ ಇದುವರೆಗೆ ಆರೋಗ್ಯ ತಪಾಸಣೆ ಹಾಗೂ
ನೇತ್ರದಾನ, ದೇಹದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸುತ್ತ ಬಂದಿದೆ. ನಮ್ಮ ತಂಡದ ಕಾರ್ಯಾವಧಿಯಲ್ಲಿ ಇನ್ನು ಅನೇಕ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ಯತ್ನಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net