

ಗೋಕಾಕ: ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ ಎಂದು ರೋಟರಿ ಕ್ಲಬ್ ಪದಗ್ರಹಣ ಅಧಿಕಾರಿ ಅವಿನಾಶ ಪೋತದಾರ ಹೇಳಿದರು.
ನಗರದ ರೋಟರಿ ರಕ್ತಭಂಡಾರ ಸಭಾಂಗಣದಲ್ಲಿ ಭಾನುವಾರ ರೋಟರಿ ಸಂಸ್ಥೆ ಮತ್ತು ಇನ್ನರ್ವ್ಹೀಲ್ ಸಂಸ್ಥೆಯ 2024&25ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಸೇವಾ ಮನೋಭಾವವೇ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶ. ಸಮಾಜದಲ್ಲಿ ನೊಂದ ಕುಟುಂಬಗಳನ್ನು ಗುರುತಿಸಿ, ಆರ್ಥಿಕ ನೆರವು, ಆರೋಗ್ಯ, ಶಿಣ, ಸ್ವಉದ್ಯೋಗ ಕಲ್ಪಿಸಲಾಗುವುದು. ಇದರಿಂದ ಸಾಮಾಜಿಕ ಸೇವೆಯಲ್ಲಿ ತೃಪ್ತಿ ಕಾಣಬಹುದು ಎಂದರು.
ಸಾನ್ನಿಧ್ಯ ವಹಿಸಿ ೂಡಗೇರಿಯ ಮಲ್ಲಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ರೋಟರಿ ಸಂಸ್ಥೆಯ ಅಧ್ಯರಾಗಿ ಡಾ.ಸಿದ್ದಣ್ಣ ಕಮತ, ಕಾರ್ಯದರ್ಶಿ ರಾಜಶೇಖರ ಮುನ್ನೋಳಿಮಠ, ಖಜಾಂಚಿಯಾಗಿ ಸಚಿನ ಜಾಧವ ಅಧಿಕಾರ ಸ್ವೀಕರಿಸಿದರೆ, ಇನ್ನರ್ವ್ಹೀಲ್ ಸಂಸ್ಥೆಯ ಅಧ್ಯರಾಗಿ ಜಯಶ್ರೀ ಕಮತ, ಕಾರ್ಯದರ್ಶಿಯಾಗಿ ಅನುಪಾ ಕೌಶಿಕ, ಖಜಾಂಚಿಯಾಗಿ ಗಿರಿಜಾ ಮುನ್ನೋಳಿಮಠ ಅಧಿಕಾರ ಸ್ವೀಕರಿಸಿದರು. ರೂಪಾ ಪೋತದಾರ, ಮಹೇಶ ಬೆಲ್ಲದ, ಮಲ್ಲಿಕಾರ್ಜುನ ಈಟಿ, ಗಿರೀಶ ಝಂವರ ಉಪಸ್ಥಿತರಿದ್ದರು.