ಸಮಾಜ ಸೇವಕರಲ್ಲಿ ನಿಸ್ವಾರ್ಥ ಭಾವ

bhr sanmama
ಬಾಳೆಹೊನ್ನೂರು ಸಮೀಪದ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರನ್ನು ಸರ್ವಧರ್ಮ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು. ಕೆ.ಭರತ್, ಗಂಗಾಧರ್, ಗೌತಮ್, ಚಂದ್ರಶೇಖರ್ ರೈ, ಸುರೇಶ್, ನಂದಿನಿ, ನಂದಿತಾ ಇತರರಿದ್ದರು.
Published on

ಬಾಳೆಹೊನ್ನೂರು: ಸಮಾಜ ಸೇವೆ ಮಾಡುವವರಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಎಂದು ಸರ್ವಧರ್ಮ ಸೇವಾ ಸಮಿತಿಯ ಅಧ್ಯಕ್ಷ ಕೆ.ಭರತ್ ಹೇಳಿದರು.

ಖಾಂಡ್ಯ ಹೋಬಳಿ ದೇವದಾನ ಮಲಮಕ್ಕಿಯಲ್ಲಿ ಮನೆಯ ಛಾವಣಿ ದುರಸ್ತಿಮಾಡಿಕೊಟ್ಟ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಸಮಾಜ ಸೇವಕರಿಗೆ ಸೇವಾ ಮನೋಧರ್ಮ ಮಾತ್ರ ಇರುತ್ತದೆ. ದೇವರು ಕೇವಲ ಗುಡಿ ಗೋಪುರಗಳಲ್ಲಿ ಇಲ್ಲ. ನಮ್ಮ ನಡುವೆ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವವರಲ್ಲಿ ದೇವರಿದ್ದಾನೆ. ಕೆಲ ದಿನಗಳ ಹಿಂದೆ ಮಲಮಕ್ಕಿಯ ನಾಗರಾಜ್ ಅವರ ಮನೆಯನ್ನು ದುರಸ್ತಿಪಡಿಸಿಕೊಟ್ಟ ವಿಪತ್ತು ಘಟಕದ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ ಎಂದರು. ಮುಖಂಡರಾದ ಗಂಗಾಧರ್, ಗೌತಮ್ ಹಾಂದಿ, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸುರೇಶ್, ಶೌರ್ಯ ವಿಪತ್ತು ಘಟಕದ ಮಾಸ್ಟರ್ ಚಂದ್ರಶೇಖರ್ ರೈ, ಸ್ವಯಂ ಸೇವಕ ಸುರೇಶ್ ಕೋಟ್ಯಾನ್, ಅವಿನಾಶ್ ಟೆಲಿಸ್, ಹನ್ೀ ರಘುಪತಿ, ಶಾಜಿಯಾ, ನಂದಿನಿ, ನಂದಿತಾ, ಒಕ್ಕೂಟದ ಮಾಜಿ ಅಧ್ಯಕ್ಷ ಸುಧಾಕರ್, ಮಲಮಕ್ಕಿ ಪಲ್ಲವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net