

ಚಿತ್ರದುರ್ಗ: ಸಮಾಜ ಸುಧಾರಣೆಗೆ ಆದ್ಯ ವಚನಕಾರ ಶಿವಶರಣ ಹಡಪದ ಅಪ್ಪಣ್ಣ ಅವರು ಮಹತ್ತರವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಹೊಳ ಲ್ಕೆರೆ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಬಿ.ಒ.ಸದಾಶಿವಪ್ಪ ಹೇಳಿದರು.
ಜಿಲ್ಲಾಡಳಿತ, ಡಿಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು,ಬಸವಣ್ಣ ಅವರ ಯಶಸ್ಸಿನ ಹಿಂದಿನ ಶಕ್ತಿಯಾ ಗಿ ಗುರುತಿಸಿಕೊಂಡಿದ್ದ ಅಪ್ಪಣ್ಣ ಅವರು,ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ದೂರು ಮಾಡಲು ಶ್ರಮಿಸಿದ್ದರು.
ರಾಜ್ಯ ಸರ್ಕಾರ ಶಿವಶರಣ ಹಡಪದ ಅಪ್ಪಣ್ಣ ಸಂಶೋಧನಾ ಪೀಠ ಸ್ಥಾಪಿಸಲು ಉದ್ದೇಶಿಸಿದೆ. ಅಪ್ಪಣ್ಣ ಅವರ ವಚನಗಳ ಜತೆಗೆ ಅವರ ಪತ್ನಿ ಲಿಂಗಮ್ಮನವರ 114 ವಚನಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ನಿಜಶರಣ ಹಡಪದ ಅಪ್ಪಣ್ಣನವರ ವಚನ ಆಶಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ,12ನೇ ಶತಮಾನ ಭಾರತೀಯ ಇತಿಹಾಸದ ಪ್ರಮುಖ ಘಟ್ಟವೆಂದೇ ಗುರುತಾಗಿದೆ. ಈ ಅವಧಿ ವೈಚಾರಿಕ,ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ರಾಂತಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿತು. ಜಾತಿ ಪದ್ಧತಿ ತೊಡೆದು ಹಾಕಲು ಪ್ರಯತ್ನಿಸುವುದರೊಂದಿಗೆ ಕಾಯಕ ಮಹತ್ವವನ್ನು ಬಸವಣ್ಣ ಸಾರಿದ್ದರು.
ಅನುಭವ ಮಂಟಪದಲ್ಲಿದ್ದ ಪ್ರತಿಯೊಬ್ಬ ಶರಣ,ಶರಣೆಯರು ಕಾಯಕಕ್ಕೆ ಪ್ರೋತ್ಸಾಹಿಸಿದರು. ಬಸವಣ್ಣನವರ ಜತೆ ನಿಂತಿದ್ದ ಅಪ್ಪಣ್ಣ ಅವರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಅಧ್ಯಕ್ಷ ಬಿ.ಕೆ. ಜಯಪ್ಪ,ತಾಲೂಕು ಅಧ್ಯಕ್ಷ ವೃಷಬೇಂದ್ರ,ಖಜಾಂಚಿ ಉಮಾಪತಿ,ನಿರ್ದೇಶಕ ಪಿ.ಆರ್.ಸಿದ್ದಪ್ಪ,ಕೆಪಿಎಂ ಗಣೇಶಯ್ಯ,ವಿವಿಧ ಇಲಾಖೆಗಳು ಅಧಿಕಾರಿಗಳು,ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಮುಖಂಡರು ಹಾಗೂ ಗಣ್ಯರು ಇದ್ದರು. ಗಂಗಾಧರ್ ತಂಡದವರು ಗೀತಗಾಯ ನಡೆಸಿಕೊಟ್ಟರು.
(ಸಿಟಿಡಿ 3 ಶಿವ ಶರಣರ ಹಡಪದ ಅಪ್ಪಣ್ಣ)
ಚಿತ್ರದುರ್ಗದ ಡಿಸಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ,ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಅಧ್ಯಕ್ಷ ಬಿ.ಕೆ.ಜಯಪ್ಪ,ತಾಲೂಕು ಅಧ್ಯಕ್ಷ ವೃಷಬೇಂದ್ರ, ಖಜಾಂಚಿ ಉಮಾಪತಿ,ನಿರ್ದೇಶಕ ಪಿ.ಆರ್.ಸಿದ್ದಪ್ಪ ಹಾಗೂ ಎಸ್.ಕೆ.ಮಲ್ಲಿಕಾರ್ಜುನ,ಕೆಪಿಎಂ ಗಣೇಶಯ್ಯ ಮತ್ತಿತರರು ಇದ್ದರು.