

ಬಾಗಲಕೋಟೆ: ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಂದ ದೂರ ಸರಿದು, ಸಮಾಜ ಸುಧಾರಣೆಗೆ ಯುವ ಸಮುದಾಯ ಮುಂದಾಗಬೇಕು ಎಂದು ನಗರ ಪೊಲೀಸ್ ಎಎಸ್‌ಐ ಧರ್ಮರಾಜ ಧೂಳಖೇಡ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ,ಎನ್.ಎಸ್.ಎಸ್. ಘಟಕ ೧ ಮತ್ತು ೨ ಮತ್ತು ಪೊಲೀಸ್ ಇಲಾಖೆ ಗುರುವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವ್ಯಸನಿಗಳು ಮನಸ್ಸು ಹಾಗೂ ದೇಹದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಆಗ ಅವರಿಂದ ಅಪರಾಧಗಳು ಸಂಭವಿಸುತ್ತವೆ. ಇವುಗಳ ಸಹವಾಸ ಬಿಟ್ಟು, ಉತ್ತಮ ಶಿಕ್ಷಣ ಪಡೆದು ಜೀವನದ ಗುರಿ ಸಾಽಸಿ ಪಾಲಕರ ಕನಸನ್ನು ಸಾಕಾರಗೊಳಿಸಿಬೇಕು ಎಂದರು.
ಸಮಾಜ ಸುಧಾರಣೆಯಲ್ಲಿ ಮತ್ತು ಅಪರಾಧ ಪ್ರಕರಣಗಳನ್ನು ತಗ್ಗಿಸುವಲ್ಲಿ ಯುವಕರು ಪ್ರಮುಖ ಪಾತ್ರವಹಿಸಬೇಕು. ಇಲಾಖೆಯ ಜೊತೆಗೆ ಸಹಕರಿಸುವುದರ ಮೂಲಕ ವ್ಯಸನಮುಕ್ತ ಸಮಾಜವನ್ನು ಕಟ್ಟುವಂತೆ ಕರೆ ನೀಡಿದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ, ವಿದ್ಯಾರ್ಥಿಗಳು ವ್ಯಸನಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳಿಂದ ಒಳ್ಳೆಯ ಆರೋಗ್ಯವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಸ್ನೇಹಿತರನ್ನು ಹೊಂದಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾಧನೆ ಸಾಧ್ಯ ಎಂಬ ಅಂಶವನ್ನು ಅರಿಯಬೇಕು.ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಿ ವ್ಯಕ್ತಿ ಮತ್ತು ಸಮಾಜದ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದರು.
ಈ ಪಿಡುಗಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯುವಕರು ಶ್ರಮಿಸಬೇಕು ಎಂದರು.
ಇಲಾಖೆಯ ಸುಭಾಸ್ ನಾಯಕ, ಮಂಜುನಾಥ ಕುರಿ, ಎನ್.ಎಸ್.ಎಸ್.ಅಽಕಾರಿ ಎಸ್.ಎಂ.ಹಡಪದ ವೇದಿಕೆ ಮೇಲಿದ್ದರು. ಸುಮಾ ವಡ್ಡರ ಹಾಗೂ ಅನಿತಾ ದಡ್ಡಿ ಪ್ರಾರ್ಥಿಸಿದರು. ಡಾ.ಎಸ್.ಎಸ್.ಹಂಗರಗಿ ಸ್ವಾಗತಿಸಿದರು.ಉಪನ್ಯಾಸಕಿ ಸವಿತಾ ಜೇವೂರ ನಿರೂಪಿಸಿದರು. ಎನ್.ಎಸ್.ಎಸ್.ಅಽಕಾರಿ ಎಸ್.ವೈ.ಬೊಮ್ಮಣ್ಣವರ ವಂದಿಸಿದರು.