ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮುಖ್ಯ

25 TDL 1
ತೇರದಾಳ ಜೆವಿಮಂಡಳ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ಪುರಸ್ಕಾರ ಸಮಾರಂಭ ಡಿಡಿಪಿಐ ಅಜಿತ ಮನ್ನಿಕೇರಿ ಉದ್ಘಾಟಿಸಿದರು. ಜಿನಸೇನ ಭಟ್ಟಾರಕ ಪಟ್ಟಾಚಾರ್ಯ, ಸಿದ್ದಾರೂಢ ಶರಣರು, ಪ್ರವೀಣ ನಾಡಗೌಡ, ಬಿಇಒ ಎ.ಕೆ.ಬಸನ್ನವರ ಇದ್ದರು.
Published on

ಬಾಗಲಕೋಟೆ: ಶಿಕ್ಷಕರ ದಿನಾಚರಣೆ ಎನ್ನುವುದು ಹೇಳುವಿಕೆ ಮತ್ತು ಕೇಳುವಿಕೆಯ ಸಮಾಗಮ. ಕೊಠಡಿಗಳ ಮಧ್ಯೆ ಮಕ್ಕಳ ಭಾವನೆ ಅರಿತುಕೊಂಡು ತನ್ನಲ್ಲಿರುವ ಜ್ಞಾನ ಶಿಕ್ಷಕನು ಸಂಪೂರ್ಣವಾಗಿ ಸಮರ್ಪಣೆ ಮಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಮುಖ ಪಾತ್ರ ವಹಿಸುತ್ತಾನೆ ಎಂದು ಡಿಡಿಪಿಐ ಅಜೀತ ಮನ್ನಿಕೇರಿ ಅಭಿಪ್ರಾಯಪಟ್ಟರು.

ತೇರದಾಳ ಸ್ಥಳೀಯ ಜೆವಿಮಂಡಳ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಕಲಿಕೆಗಾಗಿ ಗುರುವಿನಲ್ಲಿ ಶ್ರೇಷ್ಠವಾದ ಗೌರವ ಇಟ್ಟುಕೊಂಡು ಸಾವಧಾನ, ಶ್ರದ್ಧೆ, ಅವಿರತ ಪರಿಶ್ರಮಗಳ ಮೂಲಕ ಅಧ್ಯಯನ ಮಾಡಿದರೇ ದೇಶದ ಆಸ್ತಿಯಾಗುತ್ತಿರಿ ಎಂದು ಕಿವಿಮಾತು ಹೇಳಿದರು. ಹಾಗೇಯೆ ಶಿಕ್ಷಕರು ನಿರಂತರವಾದ ಓದಿನ ಮೂಲಕ ಮಕ್ಕಳ ವಿನಯ ಭಾವನೆಗೆ ಪೂರಕವಾಗಿ ಆಳವಾಗಿ ಕಲಿಸಬೇಕು. ಅನುದಾನಿತ ಸಂಘದವರ ಬೇಡಿಕೆಗಳನ್ನು ಸಮಯಕ್ಕನುಸಾರವಾಗಿ ಸರ್ಕಾರದ ಗಮನ ತರುವ ಕಾರ್ಯಮಾಡಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಲಟ್ಟಿ ಮಾತನಾಡಿ, ಸರ್ಕಾರಿ ನೌಕರರಂತೆ ಅನುದಾನಿತ ಶಾಲೆಗಳ ಶಿಕ್ಷಕರು ಎಲ್ಲಾ ರೀತಿಯ ಸೇವೆ ಸಲ್ಲಿಸುತ್ತಿದ್ದು, ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಎನ್‌ಪಿಎಸ್ ಮತ್ತು ಒಪಿಎಸ್ ಬಂದಿರುವುದಿಲ್ಲ. ಜ್ಯೋತಿ ಸಂಜೀವಿನಿ ಅನ್ವಯಿಸಬೇಕು. ನಮ್ಮ ಶಾಲೆಗಳಿಗೂ ಶ್ಯೂ ಮತ್ತು ಸಾಕ್ಸಗಳನ್ನು ಸರ್ಕಾರ ವಿತರಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.

ಬಿಇಒ ಎ.ಕೆ.ಬಸನ್ನವರ ಮಾತನಾಡಿದರು. ಡಾ.ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಟಿ.ಸಿ.ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು. ಹಿಪ್ಪರಗಿಯ ಸಿದ್ದಾರೂಢ ಶರಣರು, ಡಿ.ಆರ್.ಪಾಟೀಲ. ಡಾ.ಜೆ.ಬಿ.ಆಲಗೂರ, ಪ್ರವೀಣ ನಾಡಗೌಡ, ಎಂ.ಪಿ.ಅಸ್ಕಿ, ಪಿ.ಎ.ರಾಠೋಡ, ಪ್ರೌಢ ವಿಭಾಗದ ಶಿಕ್ಷಣ ಸಂಯೋಜಕ ಎಸ್.ಜಿ.ಬಿಜಾಪುರ, ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎಸ್.ಕಲ್ಯಾಣಿ, ಸಿಆರ್‌ಪಿ ಎಂ.ಎA.ಸೋರಗಾAವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net