ಸಮಾಜ ತಿದ್ದುತ್ತಿರುವ ಧರ್ಮಸ್ಥಳ ಸಂಸ್ಥೆ

virendra heggade
Published on

ಹುಮನಾಬಾದ್: ಜನರ ಬದುಕಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿ ಸಮಾಜ ತಿದ್ದುವಂಥ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಉತ್ತಮ ಸಂಸ್ಕಾರ, ಆಚಾರ ವಿಚಾರಗಳನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸುತ್ತಿದೆ ಎಂದು ಚಳಕಾಪುರದ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಹೇಳಿದರು.
ಮಾಣಿಕನಗರ ಮಾಣಿಕ ಸೌಧದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಇಂಥ ಕಾರ್ಯಕ್ರಮ ಅವಶ್ಯವಾಗಿದೆ. ದುಶ್ಚಟಗಳ ವಿರುದ್ಧ ಯೋಜನೆ ನಡೆಸುತ್ತಿರುವ ಮದ್ಯವರ್ಜನ ಶಿಬಿರ, ಸ್ವಾಸ್ಯ ಸಂಕಲ್ಪ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಡೆಸುವ ಹಲವು ಕಾರ್ಯಕ್ರಮಗಳಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ಲಕ್ಷಾಂತರ ಕುಟುಂಬಗಳಿಗೆ ದಾರಿ ದೀಪವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸ್ವಾವಂಬನೆ ಜೀವನ ಮಾಡಲು ಸಹಕಾರಿ ಆಗಿದೆ ಎಂದು ತಿಳಿಸಿದರು.
ಸಂಸ್ಥೆ ಯೋಜನಾಧಿಕಾರಿ ವೀರೇಶ ಪ್ರಾಸ್ತಾವಿಕ ಮಾತನಾಡಿ, ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿರುವ ಹಾಗೂ ಸಮುದಾಯ ಅಭಿವೃದ್ಧಿ, ಜನಮಂಗಳ ಕಾರ್ಯಕ್ರಮದಡಿ ನಿರ್ಗತಿಕರಿಗೆ ನೀಡುತ್ತಿರುವ ಸಲಕರಣೆಗಳು, ಒಟ್ಟು ೫೫ ಫಲಾನುಭವಿಗಳಿಗೆ ಪ್ರತಿ ತಿಂಗಳು ೭೫೦ ರಿಂದ ೧೦೦೦ ರೂ. ಮಾಸಾಶನ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ದೃಷ್ಟಿಯಿಂದ ೩೬ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿದ ಣಕ್ಕೆ ಸುe್ಞÁನ ನಿಧಿ ಮಂಜೂರಾಗಿದೆ. ನಾಲ್ಕು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೀಡಲಾಗುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹಿಸಲು ಶ್ರೀ ಕ್ಷೇತ್ರದ ಪೂಜ್ಯರು ರಾಜ್ಯಸಭಾ ಸದಸ್ಯರ ವಿಶೇಷ ಅನುದಾನದಡಿ ಬೀದರ್ ಜಿ¯್ಲೆಯ ವ್ಯಾಪ್ತಿಗೆ ೨೧ ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದರು.
ಆರೋಗ್ಯ ರಕ್ಷಾ ಕಾರ್ಯಕ್ರಮದಡಿ ಮಂಜೂರಾದ ನಾಲ್ವರು ಸದಸ್ಯರಿಗೆ ಚೆಕ್, ಸೆಲ್ಕೋ ಸೋಲಾರ್ ವಿತರಿಸಲಾಯಿತು. ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ೬೧ ದಂಪತಿ ಪಾಲ್ಗೊಂಡಿದ್ದರು.
ಬಿಜೆಪಿ ಮುಖಂಡ ಸಂತೋಷ ಪಾಟೀಲ್, ಮಾಜಿ ಶಾಸಕ ಸುಭಾಷ ಕಲ್ಲೂರ, ಪ್ರಮುಖರಾದ ಮನೋಜಕುಮಾರ, ಪಂಚಶೀಲ ಹೆಗ್ಗಣಿ, ವಿಠಲ ಡೊಕರೆ, ಅರವಿಂದ, ಶ್ರೀಮಂತ, ಮೇಲ್ವಿಚಾರಕಿ ಕಾವ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net